ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆಗೆ ಬರೋಬ್ಬರಿ 400 ಕೆ.ಜಿ ತೂಕದ ಬೀಗ ಹಾಗೂ ಕೀಲಿಕೈ ಆಗಮಿಸಿದೆ.
ಈ ಬೃಹತ್ ಬೀಗವು ಬರೋಬ್ಬರಿ 10 ಅಡಿ ಎತ್ತರ, 4.5 ಅಡಿ ಅಗಲ ಹಾಗೂ 9.5 ಇಂಚು ದಪ್ಪವಿದ್ದು, ಇದರ ತಯಾರಿಕೆಗೆ ಸುಮಾರು ಆರು ತಿಂಗಳು ಬೇಕಾಗಿತ್ತು ಎಂದು ಬೀಗ ತಯಾರಕ ಸತ್ಯಪ್ರಕಾಶ್ ಶರ್ಮಾ ತಿಳಿಸಿದ್ದಾರೆ.
ಇದನ್ನು ಆಲಿಘಡದಿಂದ ತರಲಾಗಿದ್ದು, ಅತ್ಯಂತ ಸುಂದರವಾಗಿ ನಿರ್ಮಾಣವಾಗಿರುವ ಈ ಬೀಗ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
ಇದಲ್ಲದೆ ಕಾಶ್ಮೀರ ಹಾಗೂ ಅಫ್ಘಾನಿಸ್ತಾನದಿಂದಲೂ ಉಡುಗೊರೆಗಳು ಬಂದಿದ್ದು, ಇವುಗಳನ್ನು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಅವರು ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ಅವರಿಗೆ ಹಸ್ತಾಂತರಿಸಿದ್ದಾರೆ.
ಇನ್ನು ತಮಿಳುನಾಡಿನ ರೇಷ್ಮೆ ತಯಾರಕರು ರಾಮಮಂದಿರವನ್ನು ಚಿತ್ರಿಸಿರುವ ರೇಷ್ಮೆ ಬೆಡ್‌ಶೀಟ್ ಅನ್ನು ಕಳುಹಿಸಿಕೊಟ್ಟಿದ್ದು, ರಾಮನ ಅಭಿಷೇಕಕ್ಕಾಗಿ ಅಫ್ಘಾನಿಸ್ತಾನದಿಂದ ಕುಭಾ ನದಿಯ ನೀರನ್ನು ಕಳುಹಿಸಿಕೊಡಲಾಗಿದೆ.