ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ತೊಡುಪುಳ ನ್ಯೂಮನ್ ಕಾಲೇಜ್ ಪ್ರಾಧ್ಯಾಪಕರ ಕೈ ಕತ್ತರಿಸಿದ ಪ್ರಕರಣದ ಪ್ರಮುಖ ಆರೋಪಿ ಸವಾದ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಜ.27ರವರೆಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಲಾಗಿದೆ.
ಹೆಚ್ಚಿನ ವಿಚಾರಣೆಗೆ ಸಂಬಂಧಿಸಿ ಎನ್‌ಐಎ ಅಧಿಕಾರಿಗಳು ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಲಯ, ಸವಾದ್‌ನ ವಿಚಾರಣೆಗೆ ಅನುಮತಿಸಿದೆ.
ಧರ್ಮ ನಿಂದನೆಯಲ್ಲಿ ತೊಡಗಿದ್ದಾರೆ ಎಂಬ ಆರೋಪದಲ್ಲಿ ಜು.4, 2010 ರಂದು ನ್ಯೂಮನ್ ಕಾಲೇಜಿನಲ್ಲಿ ಮಲಯಾಳಂ ಅಧ್ಯಾಪಕರಾಗಿದ್ದ ಪ್ರೊಫೆಸರ್ ಟಿಜೆ ಜೋಸೆಫ್ ಅವರ ಕೈಯನ್ನು ತಂಡ ಕತ್ತರಿಸಿತ್ತು. ಇದಾದ ಬಳಿಕ ಪ್ರಮುಖ ಆರೋಪಿ ಸವಾದ್ ತಲೆಮರೆಸಿಕೊಂಡಿದ್ದ. ಇದೀಗ 12 ವರ್ಷಗಳ ಬಳಿಕ ಕಣ್ಣೂರಿನ ಮಟ್ಟನ್ನೂರಿನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಎನ್‌ಐಎ ಯಶಸ್ವಿಯಾಗಿದೆ.
ಈ ನಡುವೆ ಎರ್ನಾಕುಳಂ ಸಬ್ ಜೈಲಿನಲ್ಲಿ ನಡೆದ ಗುರುತು ಪತ್ತೆ ಪರೇಡ್‌ನಲ್ಲಿ ಪ್ರೊ. ಟಿ.ಜೆ. ಜೋಸೆಫ್ ಸವಾದ್ ನನ್ನು ಗುರುತಿಸಿದ್ದರು.