ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಅಂಗಡಿಗಳ ಫಲಕಗಳಲ್ಲಿ ಕನ್ನಡ ಕಡ್ಡಾಯವಾಗಿರಲಿ ಎನ್ನುವ ಹೋರಾಟ ನಡೆಯುತ್ತಿಲಿದ್ದು, ಶೇ. 60ರಷ್ಟು ಕನ್ನಡ ಬಳಕೆ ಕಡ್ಡಾಯ ಮಾಡಲಾಗಿದೆ.
ಬೋರ್ಡ್ಗಳನ್ನು ಕನ್ನಡಕ್ಕೆ ಬದಲಾಯಿಸಲು ಇನ್ನೇನು ತಿಂಗಳಷ್ಟೇ ಅವಕಾಶ ಇದೆ. ಫೆ.28ರಂದು ಬೋರ್ಡ್ ಬದಲಾವಣೆಗೆ ಕಡೆಯ ದಿನವಾಗಿದ್ದು, ಬಿಬಿಎಂಪಿ ಬೆಂಗಳೂರಿನ 37 ಸಾವಿರಕ್ಕೂ ಹೆಚ್ಚು ಅಂಗಡಿಗಳಿಗೆ ನೊಟೀಸ್ ನೀಡಿದೆ.
ಈವರೆಗೂ 37,671 ಅಂಗಡಿಗಳಿಗೆ ನೊಟೀಸ್ ನೀಡಲಾಗಿದೆ. ಫೆ.28ರ ನಂತರವೂ ಫಲಕದಲ್ಲಿ ಕನ್ನಡ ಇಲ್ಲದಿದ್ದರೆ ಅಂಗಡಿಯ ಲೈಸೆನ್ಸ್ ರದ್ದು ಮಾಡಲಾಗುತ್ತದೆ.
ಯಾವ್ಯಾವ ವಲಯದಲ್ಲಿ ಎಷ್ಟು ನೊಟೀಸ್ ನೀಡಲಾಗಿದೆ?
ಬೊಮ್ಮನಹಳ್ಳಿ – 8103
ದಾಸರಹಳ್ಳಿ – 1548
ಬೆಂಗಳೂರು ಪೂರ್ವ – 5279
ಮಹದೇವಪುರ – 5026
ರಾಜ ರಾಜೇಶ್ವರಿ ನಗರ – 2852
ಬೆಂಗಳೂರು ದಕ್ಷಿಣ – 4283
ಬೆಂಗಳೂರು ಪಶ್ಚಿಮ – 5855
ಯಲಹಂಕ – 4725