ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಮತ್ತೊಂದು ಹೊಸ ಮೈಲುಗಲ್ಲು ಸೃಷ್ಟಿ ಮಾಡಿದೆ. ಮೆಟ್ರೋ ಆರಂಭವಾದಾಗಿಂದ ಇಲ್ಲಿಯವರೆಗೂ ಬರೋಬ್ಬರಿ 100 ಕೋಟಿ ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.
ದಿನೇ ದಿನೆ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈ ಸಂಖ್ಯೆ 100 ಕೋಟಿ ದಾಟಿದೆ. 2011ರ ಡಿಸೆಂಬರ್ 29ರಂದು ಮೆಟ್ರೋ ಸಂಚಾರ ಆರಂಭವಾಗಿತ್ತು. ಇದೀಗ 2023ರ ಅಂತ್ಯಕ್ಕೆ ನೂರು ಕೋಟಿ ಪ್ರಯಾಣಿಕರು ಮೆಟ್ರೋದಲ್ಲಿ ಸುರಕ್ಷಿತವಾಗಿ ಪ್ರಯಾಣ ಮಾಡಿದ್ದಾರೆ.
ಇದರಲ್ಲಿ ಶೇ. 51ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಬಳಕೆ ಮಾಡಿದ್ದರೆ, ಶೇ.31ರಷ್ಟು ಟೋಕನ್ ಹಾಗೂ ಶೇ.14ರಷ್ಟು ಮಂದಿ ಕ್ಯೂಆರ್ ಕೋಡ್ ಬಳಕೆ ಮಾಡಿದ್ದಾರೆ.
2011-12ರಲ್ಲಿ ಸರಾಸರಿ ಮೂರು ಲಕ್ಷದ 80 ಸಾವಿರ ಆದಾಯ ಹೊಂದಿದ್ದ ಮೆಟ್ರೋ 2023ರ ಅಂತ್ಯಕ್ಕೆ ಒಂದು ಕೋಟಿ 47 ಲಕ್ಷದ 70 ಸಾವಿರ ರೂಪಾಯಿ ಆದಾಯ ಹೊಂದಿದೆ.