ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ದೂರು ದಾಖಲು

ಹೊಸದಿಗಂತ ವರದಿ ಹಾವೇರಿ:

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ ಮುಸ್ಲಿಂ ಯುವಕನ ಮೇಲೆ‌ ಪ್ರಕರಣ ದಾಖಲಾಗಿದೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಘಟನೆ ನಡೆದಿದ್ದು, ಸಾಧಿಕ್ ದಾಲ್ ರೊಟ್ಟಿ (26) ಪೋಸ್ಟ್ ಮಾಡಿದ ಆರೋಪಿ.

ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಮಾತನಾಡಿ, ಆಡಿಯೋ ಹರಿಬಿಟ್ಟಿದ್ದ. ಅಲ್ಲದೇ ಶ್ರೀರಾಮ ಮಂದಿರದ ಭಾವಚಿತ್ರದ ಮೇಲೆ ಅಲ್ಲಾ ಹು ಅಕ್ಬರ್ ಅಂತಾ ಸ್ಟೇಟಸ್ ಹಾಕಿಕೊಂಡಿದ್ದ.

ಈ ಕುರಿತು ಹಲಗೇರಿ ಠಾಣೆಗೆ ಶಿವನಗೌಡ ಮುಲ್ಕಿಗೌಡರ ಎಂಬುವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆರೋಪಿಯನ್ನ ಬಂಧನ ಮಾಡುವಂತೆ ಹಿಂದೂ ಕಾರ್ಯಕರ್ತರ ಒತ್ತಾಯ ಕೇಳಿ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here