ಹೊಸದಿಗಂತ ಡಿಜಿಟಲ್ ಡೆಸ್ಕ್:
ಡ್ರೋನ್ ಪ್ರತಾಪ್ ಬಿಗ್ ಬಾಸ್ ಸೀಸನ್ 10 ರ ಅಂತಿಮ ವಾರದಲ್ಲಿದ್ದಾರೆ. ಆಟವು ಉತ್ತಮವಾಗಿ ಸಾಗುತ್ತಿದೆ. ಡ್ರೋನ್ ಪ್ರತಾಪ್ ಅವರು ತಮ್ಮ ಸ್ಪರ್ಧೆಗಳಿಗೆ ಮಾತ್ರವಲ್ಲದೆ ತಮ್ಮ ವೈಯಕ್ತಿಕ ಸಮಸ್ಯೆಗಳಿಂದಲೂ ಸುದ್ದಿ ಮಾಡಿದರು. ಪ್ರತಾಪ್ ವಿರುದ್ಧ ಬಿಬಿಎಂಪಿ ಅಧಿಕಾರಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇದೀಗ ಮತ್ತೆ ಡ್ರೋನ್ ಪ್ರತಾಪ್ ಅವರ ಮತ್ತೊಂದು ದೋಖಾ ಬಟಾ ಬಯಲಾಗಿದೆ. ಬ್ಯೂಸಿನೆಸ್ ಪಾರ್ಟನರ್ ಸಾರಂಗ್ ಮಾನೆಗೆ ಪ್ರತಾಪ್ ಮೋಸ ಮಾಡಿರುವ ಸುದ್ದಿ ಇದೀಗ ಬೆಳಕಿಗೆ ಬಂದಿದೆ.
ಕೆಲ ತಿಂಗಳ ಹಿಂದೆ ಪುಣೆ ಮೂಲದ ಕ್ಯಾಸ್ಪರ್ ಡ್ರೊನೊಟಿಕ್ಸ್ ನ ಸಿಇಒ ಸಾರಂಗ್ ಮಾನೆ ಅವರು ಡ್ರೋನ್ ಪ್ರತಾಪ್ ಗೆ ಎಂಟು ಡ್ರೋನ್ ಗಳನ್ನು ಪೂರೈಸಲು ಒಪ್ಪಿಗೆ ನೀಡಿ ಮುಂಗಡ ಹಣ ಪಾವತಿಸಿದ್ದರು. ಸಾರಂಗ್ ಮಾನೆ ಅವರು ಪ್ರತಾಪ್ ಅವರ ಕಂಪನಿ ಡ್ರೊನಾಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್‌ನ ವ್ಯಾಪಾರ ಪಾಲುದಾರರಾಗಿದ್ದರು.
ಎಂಟು ತಿಂಗಳ ಹಿಂದೆ ಡ್ರೋನ್ ಪ್ರತಾಪ್ ಅವರು ಮಹಾರಾಷ್ಟ್ರದ ದುಲೇನಲ್ಲಿ ತಮ್ಮ ವ್ಯಾಪಾರ ಪಾಲುದಾರ ಸಾರಂಗ್ ಮಾನೆ ಅವರನ್ನು ಭೇಟಿಯಾದರು. ಪ್ರತಾಪ್ ಸಾರಂಗ್ ಮಾನೆಗೆ 9 ಡ್ರೋನ್‌ಗಳನ್ನು ನೀಡಬೇಕಿತ್ತು. ಸಾರಂಗ್ ಅವರು ಪ್ರತಾಪ್‌ಗೆ 35 ಲಕ್ಷದ 75 ಸಾವಿರ ನೀಡಿದ್ದರು. ಆದರೆ, ಪ್ರತಾಪ್ ಡ್ರೋನ್ ತಲುಪಿಸಲು ಎರಡೂವರೆ ತಿಂಗಳು ಬೇಕಾಯಿತು. ಇದಾದ ಮೇಲೆ ಇನ್ನರೆಡು ಡ್ರೋನ್‌ಗಳನ್ನು ಸಾರಂಗ್‌ಗೆ ಕಳುಹಿಸಿಕೊಟ್ಟಿದ್ದರು.
ಆದರೀಗ ಸಾರಂಗ್ ಈ ಬಗ್ಗೆ ಧ್ವನಿ ಎತ್ತಿದ್ದು, ನಾಲ್ಕು ಡ್ರೋನ್‌ಗಳು ಈಗ ಕೆಲಸ ಮಾಡುತ್ತಿಲ್ಲ ಬ್ಯಾಟರಿಗಳ ಕ್ಯಾಲಿಟಿ ಸರಿಯಿಲ್ಲ. ಮತ್ತೊಂದು ಹಾರಬೇಕಾದರೆ, ಕೆಳಗಡೆ ಬಿದ್ದು ಹೋಯಿತು. ನಾವೀಗ ತುಂಬಾ ಲಾಸ್ ನಲ್ಲಿದ್ದೀವಿ ಎಂದು ಆಕ್ರೋಶ ಹೊರಹಾಕಿದ್ದಾರೆ.