CINE | ವಿಜಯಲಕ್ಷ್ಮಿ ಪೋಸ್ಟ್‌ಗೆ ಠಕ್ಕರ್ ಕೊಡೋಕೆ ಹೋಗಿ ಎಡವಟ್ಟು ಮಾಡಿಕೊಂಡ ಪವಿತ್ರಾ ಗೌಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ದರ್ಶನ್ ಮನೆ ಜಗಳ ಇದೀಗ ಬೀದಿಗೆ ಬಂದಿದೆ, ಬೆಳ್ಳಂಬೆಳಗ್ಗೆ ಪವಿತ್ರಾ ಗೌಡ ಹಾಗೂ ವಿಜಯಲಕ್ಷ್ಮಿ ಮಧ್ಯೆ ಇನ್ಸ್ಟಾ ಪೋಸ್ಟ್ ವಾರ್ ನಡೆದಿದೆ.

ವಿಜಯಲಕ್ಷ್ಮಿ ದರ್ಶನ್ ಹಾಗೂ ಮಗ ವಿನಿಶ್ ಜೊತೆಗಿನ ಫೋಟೊ ಹಂಚಿಕೊಂಡು ಇದು ನಮ್ಮ ಒಂದೇ ಫ್ಯಾಮಿಲಿ, ಇದು ಎಲ್ಲಕ್ಕಿಂತ ಮೇಲು ಎಂದು ಹೇಳಿದ್ದಾರೆ.

ಇದಾದ ಎರಡು ಗಂಟೆಗೆ ಪವಿತ್ರಾ ದರ್ಶನ್ ಜೊತೆಗಿನ ಫೋಟೊ ಪೋಸ್ಟ್ ಮಾಡಿ 10 ವರ್ಷದ ಆನಿವರ್ಸರಿ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಮತ್ತೆ ವಿಜಯಲಕ್ಷ್ಮಿ ರಿಪ್ಲೇ ಮಾಡಿದ್ದು, ಪವಿತ್ರಾ ಗಂಡ ಹಾಗೂ ಮಗಳ ಫೋಟೊ ಪೋಸ್ಟ್ ಮಾಡಿದ್ದಾರೆ.

ಬೇರೆಯವರ ಗಂಡನ ಜೊತೆ ಫೋಟೊ ಹಾಕಿದ ಪವಿತ್ರಾ ಕ್ಯಾರೆಕ್ಟರ್ ಬಗ್ಗೆ ಪ್ರಶ್ನೆಯೆದ್ದಿದೆ, ಕೋರ್ಟ್‌ಗೆ ಹೋಗುತ್ತೀನಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!