ಕಡಲ್ಗಳ್ಳರಿಂದ ಇರಾನ್ ಮೀನುಗಾರಿಕಾ ಹಡಗನ್ನು ರಕ್ಷಿಸಿದ ಭಾರತೀಯ ನೌಕಾಪಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅರಬ್ಬೀ ಸಮುದ್ರದಲ್ಲಿ ಸೊಮಾಲಿ ಕಡಲ್ಗಳ್ಳರು ಮತ್ತೆ ಇರಾನ್ ಹಡಗನ್ನು ಅಪಹರಿಸಿದ್ದು, ಈ ವೇಳೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್‌ಎಸ್ ಸುಮಿತ್ರಾ (INS Sumitra) ಸುರಕ್ಷಿತವಾಗಿ ರಕ್ಷಿಸಿದೆ ಎಂದು ರಕ್ಷಣಾ ಅಧಿಕಾರಿಗಳ ಹೇಳಿದ್ದಾರೆ.

ಇರಾನ್ ಮೀನುಗಾರಿಕಾ ಹಡಗು ಎಂವಿ ಇಮಾನ್​​​ನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದರು. ಈ ಹಡಗಿನಲ್ಲಿ 17 ಜನ ಭಾರತೀಯ ಮೀನುಗಾರರಿದ್ದರು ಎಂದು ಹೇಳಲಾಗಿದೆ.

ಭಾರತೀಯ ಅಧಿಕಾರಿಗಳ ಪ್ರಕಾರ, ಕೊಚ್ಚಿಯಿಂದ ಪಶ್ಚಿಮಕ್ಕೆ 700 ನಾಟಿಕಲ್ ಮೈಲಿ ದೂರದಲ್ಲಿ ಇರಾನಿನ ಮೀನುಗಾರಿಕಾ ಹಡಗನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದಾರೆ.ಆದರೆ ಈ ಘಟನೆಯ ನಂತರ, ಭಾರತೀಯ ನೌಕಾಪಡೆಯು ತನ್ನ ಯುದ್ಧನೌಕೆಯನ್ನು ಹಡಗಿನ ರಕ್ಷಣೆಯಲ್ಲಿ ಇರಿಸಿ ದರೋಡೆಕೋರರ ವಶದಿಂದ ಮುಕ್ತಗೊಳಿಸಿತು.

ಈ ಪ್ರದೇಶದಲ್ಲಿ ಭಾರತೀಯ ನೌಕಪಡೆಗಳು ಭದ್ರತೆಯನ್ನು ಹೆಚ್ಚಿಸಿದ್ದು, ಭಾರತಕ್ಕೆ ಹೋಗುವ ವ್ಯಾಪಾರಿ ಹಡಗುಗಳ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಲಾಗಿದೆ ಎಂದು ಹೇಳಿದೆ. ಅಪಾಯ ಇರುವ ಅಥವಾ ದಾಳಿ ನಡೆಸುವ ಪ್ರದೇಶಗಳಲ್ಲಿ 10 ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!