ಫೆ. 27 ರಂದು 15 ರಾಜ್ಯಗಳ 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ: ಆಯೋಗ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಚುನಾವಣಾ ಆಯೋಗ ರಾಜ್ಯಸಭಾ ಚುನಾವಣಾ ದಿನಾಂಕ ಪ್ರಕಟಿಸಿದೆ. 56 ರಾಜ್ಯಸಭಾ ಸ್ಥಾನಗಳಿಗೆ ಫೆಬ್ರವರಿ 27ರಂದು ಮತದಾನ ನಡೆಯಲಿದೆ. ಇದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಘೋಷಣೆಯಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಫೆಬ್ರವರಿ 27 ರಂದು 15 ರಾಜ್ಯಗಳ ಒಟ್ಟು 56 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆ ವರಗೆ ಮತದಾನ ನಡೆಯಲಿದೆ. 4 ಗಂಟೆ ಬಳಿಕ ಮತ ಏಣಿಕೆ ಪ್ರಕ್ರಿಯೆಗಳು ಆರಂಭಗೊಳ್ಳಲಿದೆ. ರಾತ್ರಿ ವೇಳೆಗೆ ಫಲಿತಾಂಶ ಘೋಷಣೆಯಾಗಲಿದೆ. ಇನ್ನು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ.

50 ರಾಜ್ಯಸಭಾ ನಾಯಕರ ಅವಧಿ ಎಪ್ರಿಲ್ 2, 2024ಕ್ಕೆ ಅಂತ್ಯಗೊಳ್ಳುತ್ತಿದೆ. ಇನ್ನುಳಿದ 6 ನಾಯಕರು ಎಪ್ರಿಲ್ 3 ರಂದು ನಿವೃತ್ತಿ ಹೇಳುತ್ತಿದ್ದಾರೆ. ಹೀಗಾಗಿ ಒಟ್ಟು 56 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

ರಾಜ್ಯವಾರು ರಾಜ್ಯಸಭಾ ಸ್ಥಾನ(ಚುನಾವಣೆ)
ಉತ್ತರ ಪ್ರದೇಶ:10 ಸ್ಥಾನ
ಮಹಾರಾಷ್ಟ್ರ:6 ಸ್ಥಾನ
ಬಿಹಾರ : 6 ಸ್ಥಾನ
ಪಶ್ಚಿಮ ಬಂಗಾಳ : 5 ಸ್ಥಾನ
ಮಧ್ಯಪ್ರದೇಶ: 6 ಸ್ಥಾನ
ಕರ್ನಾಟಕ: 4 ಸ್ಥಾನ
ಗುಜರಾತ್ : 4 ಸ್ಥಾನ
ಆಂಧ್ರಪ್ರದೇಶ:3 ಸ್ಥಾನ
ತೆಲಂಗಾಣ:3 ಸ್ಥಾನ
ರಾಜಸ್ಥಾನ : 3 ಸ್ಥಾನ
ಒಡಿಶಾ : 3 ಸ್ಥಾನ
ಉತ್ತರಖಂಡ:1 ಸ್ಥಾನ
ಚತ್ತೀಸಘಡ:1 ಸ್ಥಾನ
ಹರ್ಯಾಣ: 1 ಸ್ಥಾನ
ಹಿಮಾಚಲ ಪ್ರದೇಶ: 1 ಸ್ಥಾನ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!