March 4, 2026
Wednesday, March 4, 2026
spot_img

VIRAL | ವಿಷಕಾರಿ ಹಾವಿನ ಬಳಿಯೇ ಕೂತು ಚಳಿ ಕಾಯಿಸಿದ ವ್ಯಕ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಧ್ಯಪ್ರದೇಶದ ಛತ್ತರಪುರದಲ್ಲಿ ವ್ಯಕ್ತಿಯೊಬ್ಬರು ಭಯಂಕರ ವಿಷಪೂರಿತ ನಾಗರ ಹಾವಿನ ಜೊತೆ ತಮಾಷೆಯಾಗಿ ಮಾತನಾಡುತ್ತ ಕುಳಿತಿರುವ ವಿಡಿಯೋ ಎಲ್ಲರನ್ನೂ ದಂಗಾಗಿಸಿದೆ.

ಹಾವು ತನ್ನ ಹತ್ತಿರ ಬರುತ್ತಿದ್ದರೂ ವ್ಯಕ್ತಿ ಶಾಂತವಾಗಿ ಕೂತು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಸದ್ಯ ಈ ಭಯಾನಕ ವಿಡಿಯೊ ಭಾರೀ ವೈರಲ್ ಆಗಿದೆ.

ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಈ ಘಟನೆ ಕಂಡು ಬಂದಿದೆ. ತೀವ್ರ ಚಳಿಯ ನಡುವೆ ರಸ್ತೆ ಪಕ್ಕದಲ್ಲಿಯೆ ವ್ಯಕ್ತಿಯೊಬ್ಬರು ಬೆಂಕಿ ಹಾಕಿಕೊಂಡು ಚಳಿ ಕಾಯಿಸುತ್ತಿದ್ದರು.

ಈ ಸಮಯದಲ್ಲಿ ಅಲ್ಲಿಗೆ ವಿಷಕಾರಿ ಹಾವು ಕೃಷ್ಣಸರ್ಪವೊಂದು ಎಂಟ್ರಿ ನೀಡಿದೆ. ಆದರೆ ಆತ ಈ ಹಾವನ್ನು ನೋಡಿ ಹೆದರುವ ಬದಲು ತಮ್ಮ ಪಕ್ಕದಲ್ಲೇ ಕುಳ್ಳಿರಿಸಿಕೊಂಡಿದ್ದಾರೆ. ಅಚ್ಚರಿಯೆಂದರೆ, ಆ ಹಾವೂ ಕೂಡ ಹೆಡೆ ಬಿಚ್ಚಿ ಶಾಂತವಾಗಿ ಆತನ ಹತ್ತಿರವೆ ನಿಂತಿದೆ.

ವೀಡಿಯೊದಲ್ಲಿ ವ್ಯಕ್ತಿ ಬೆಂಕಿಯ ಬಳಿ ಶಾಂತವಾಗಿ ಕುಳಿತಿರುವುದನ್ನು ಮತ್ತು ಅವನ ಪಕ್ಕದಲ್ಲಿ ಕಪ್ಪು ನಾಗರಹಾವು ಇರುವುದನ್ನು ಕಾಣಬಹುದು. ಆದರೆ ಆ ವ್ಯಕ್ತಿ ಅದರೊಂದಿಗೆ ಹಾಸ್ಯಮಯ ಮತ್ತು ಸ್ನೇಹಪರ ರೀತಿಯಲ್ಲಿ ಮಾತನಾಡುತ್ತಾನೆ. ವ್ಯಕ್ತಿಯು ಚಳಿ ಕಾಯಿಸುತ್ತಾ ಹಾವನ್ನುದ್ದೇಶಿಸಿ, ನೋಡು, ನಿನಗೆ ತೊಂದರೆಯಾಗಬಾರದು ಎಂದು ಇಲ್ಲಿ ಕೂರಿಸಿದ್ದೇನೆ. ಸುಮ್ಮನೆ ಶಾಂತವಾಗಿ ಕುಳಿತು ಬೆಂಕಿ ಕಾಯಿಸಿಕೊ, ಯಾರಿಗೂ ತೊಂದರೆ ಮಾಡಬೇಡ ಎಂದು ಹೇಳುತ್ತಿರುವುದು ಕೇಳಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !