ಹೊಸದಿಗಂತ ವರದಿ ಕಲಬುರಗಿ:
ಬಿದಿ ನಾಯಿಗಳ ದಾಳಿಗೆ 16 ಕುರಿ ಮರಿಗಳು ಬಲಿಯಾಗಿರುವ ಘಟನೆ ಜಿಲ್ಲೆಯ ಚಿತ್ತಾಪೂರ ಪಟ್ಟಣದ ಯರಗಲ್ ಗ್ರಾಮದ ರಸ್ತೆ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಬೆಳಿಗ್ಗೆ ಮೇಯುತ್ತಿದ್ದ ಕುರಿಗಳ ಮೇಲೆ ಬಿದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಶಿವು ಮರೆಪ್ಪ ಎಂಬುವರಿಗೆ ಸೇರಿರುವ 16 ಕುರಿ ಮರಿಗಳು ಸಾವನ್ನಪ್ಪಿವೆ.
ಘಟನಾ ಸ್ಥಳಕ್ಕೆ ಪಶು ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಲಾಗಿದೆ. ಇನ್ನೂ, ಬಿದಿ ನಾಯಿಗಳ ಅಟ್ಟಹಾಸಕ್ಕೆ ಬ್ರೆಕ್ ಹಾಕುವಂತೆ ಸಾರ್ವಜನಿಕರ ಮನವಿ ಮಾಡಿದ್ದಾರೆ.

