ಹೊಸದಿಗಂತ ಡಿಜಿಟಲ್ ಡೆಸ್ಕ್:
ಬರೋಬ್ಬರಿ 82 ಕೋಟಿ ರೂಪಾಯಿ ಬೆಲೆ ಬಾಳುವ ಕೊಕೇನ್‌ನ್ನು ಸಾಗಾಟ ಮಾಡುವ ವೇಳೆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ವಿಮಾನ ನಿಲ್ದಾಣದಲ್ಲಿ ನೈಜೀರಿಯಾ ಮೂಲದ ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಕೆ ತನ್ನ ಸಾಮಾಗ್ರಿಗಳ ಜೊತೆ ಕೆಲವು ವಸ್ತುಗಳನ್ನು ಬಚ್ಚಿಟ್ಟಿದ್ದು ಕಾಣಿಸಿದ್ದು, ವಿವರವಾಗಿ ಪರಿಶೀಲನೆ ನಡೆಸಲಾಗಿದೆ.
ಒಟ್ಟಾರೆ 5.8 ಕೆಜಿ ಬಿಳಿ ಬಣ್ಣದ ಪುಡಿ ಇರುವ ಪಾಕೆಟ್‌ಗಳು ಕಾಣಿಸಿದ್ದು, ಪರಿಶೀಲನೆ ವೇಳೆ ಅದು ಕೊಕೇನ್ ಎನ್ನುವುದು ತಿಳಿದಿದೆ. ಇದರ ಅಂದಾಜು ಮೌಲ್ಯ 82 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.