ಹೊಸದಿಗಂತ ಡಿಜಿಟಲ್ ಡೆಸ್ಕ್:
ಅವರು ಭಾರತ ತಂಡದ ಆಫ್ ಸ್ಪಿನ್ನರ್. ಹಾಗೇ ಮ್ಯಾಚ್ ವಿನ್ನರ್. ಈ ಬುದ್ಧಿವಂತ ಸ್ಪಿನ್ನರ್ ವೈಜಾಗ್‌ನಲ್ಲಿನ ಇಂಗ್ಲೆಂಡ್ ತಂಡ ಮಾತ್ರವಲ್ಲದೆ ಎಲ್ಲಾ ದಾಖಲೆಗಳನ್ನು ಮುರಿದು. ಇದೀಗ ಶ್ರೇಷ್ಠರ ದಾಖಲೆಗಳನ್ನು ಮುಗಿಸೋಕೆ ಹೊರಟಿದ್ದಾರೆ.
ರವಿಚಂದ್ರನ್ ಅಶ್ವಿನ್. ಸ್ಪಿನ್ ಮಾಸ್ಟರ್, ಆಧುನಿಕ ಕ್ರಿಕೆಟ್‌ನ ದಂತಕಥೆ. 37ರ ಹರೆಯದಲ್ಲೂ ಆಫ್ ಸ್ಪಿನ್ನರ್ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ ವೈಜಾಗ್ ಟೆಸ್ಟ್‌ನಲ್ಲಿ ಹಲವಾರು ದಾಖಲೆಗಳನ್ನು ಮಾಡಲು ಸಿದ್ಧರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸೋಲಿಗೆ ಉತ್ತರದ ಅವಶ್ಯಕತೆಯಿದ್ದು ಆರ್.ಅಶ್ವಿನ್ ಇತಿಹಾಸವನ್ನು ಸೃಷ್ಟಿಸಿಸಲು ಮತ್ತು ಶ್ರೇಷ್ಠರ ದಾಖಲೆಗಳನ್ನು ಮುರಿಯಲು ಸಜ್ಜಾಗಿದ್ದಾರೆ.
ವಿಕೆಟ್ ಚೇಸಿಂಗ್ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಮಿಂಚುತ್ತಿರುವ ಚಾಣಾಕ್ಷ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಗಳ ಗಡಿ ಮುಟ್ಟುವ ತವಕದಲ್ಲಿದ್ದಾರೆ. 96 ಟೆಸ್ಟ್‌ಗಳಲ್ಲಿ 496 ವಿಕೆಟ್‌ಗಳನ್ನು ಪಡೆದಿರುವ ಆ್ಯಶ್, ಅತ್ಯಂತ ವೇಗವಾಗಿ 500 ವಿಕೆಟ್ ಪಡೆದ ಭಾರತೀಯ ಬೌಲರ್ ಆಗಿದ್ದಾರೆ ಮತ್ತು ವೈಜಾಗ್ ಟೆಸ್ಟ್‌ನಲ್ಲಿ ಕೇವಲ 4 ವಿಕೆಟ್‌ಗಳೊಂದಿಗೆ ಒಟ್ಟಾರೆ 2 ನೇ ಸ್ಥಾನದಲ್ಲಿದ್ದಾರೆ. ಅವರು 5500ರ ಕ್ಲಬ್ ಸೇರಿದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.