ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡೀಪುರ ರೈಲ್ವೆ ಯೋಜನೆಗಾಗಿ ‘ಸೇವ್ ಬಂಡೀಪುರ’ ಎಂಬ ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಲಾಗಿದೆ. ‘ಬಂಡಿಪುರ ಉಳಿಸಿ’ ಎಂಬ ಅಭಿಯಾನವನ್ನು ಪರಿಸರವಾದಿಗಳು ಆರಂಭಿಸಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ ನೆರೆಯ ಕೇರಳ ಸರ್ಕಾರದ ಮನವಿಯನ್ನು ಸ್ವೀಕರಿಸುವುದಾಗಿ ಹೇಳಿದ್ದರು. ಈ ಹಂತದಲ್ಲಿ ಬಂಡೀಪುರ ಭಾಗದಲ್ಲಿ ರಾತ್ರಿ ಸಂಚಾರ ನಿಷೇಧವನ್ನು ಸಡಿಲಿಸುವ ಸುಳಿವನ್ನು ಸಚಿವರು ನೀಡಿದ್ದರು.
ಕೇರಳದ ನೀಲಾಂಬೂರಿನಿಂದ ಕರ್ನಾಟಕದ ನಂಜನಗೂಡಿಗೆ ರೈಲು ಮಾರ್ಗ ನಿರ್ಮಾಣವಾಗಲಿದೆ. ವಯನಾಡ್ ಮೂಲಕ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಇದೆ. ನೀಲಾಂಬೂರು-ನಂಜಗೂಡು ರೈಲ್ವೆ ಯೋಜನೆಯ ಅಂತಿಮ ವರದಿಯಾಗಿದೆ. ವರದಿ ಸಿದ್ಧಪಡಿಸಲು ವೈಮಾನಿಕ ಸಮೀಕ್ಷೆ ಪೂರ್ಣಗೊಂಡಿದೆ.
ಅಭಿವೃದ್ಧಿಗಾಗಿ ಅರಣ್ಯ ನಾಶ ಮಾಡಬಾರದು ಎಂಬ ಪರಿಸರ ಹೋರಾಟಗಾರರ ಆಕ್ರೋಶಕ್ಕೆ ಈ ಯೋಜನೆ ಇದೀಗ ಕಾರಣವಾಗಿದೆ. ಅವರು “ಬಂಡೀಪುರ ಉಳಿಸಿ” ಎಂಬ ಅಭಿಯಾನವನ್ನು ಸಹ ನಡೆಸುತ್ತಿದ್ದಾರೆ.
ವನ್ನ ಜೀವಿಗಳನ್ನು ಉಳಿಸಿ ಕೊನೆಗೆ ಕಾದು ಉಳಿಯೋದಿಲ್ಲ ಪ್ರಾಣಿಗಳು ಉಳಿಯೋದಿಲ್ಲ ಅರಣ್ಯ ಇಲಾಖೆ ಇರೋದ್ಯಾಕೆ ಪ್ರಾಣಿಗಳನ್ನ ಉಳಿಸೋದಕ್ಕೋ ಸಾಯಿಸೋಕ್ಕೋ