CINE | ಮನೆ ಫಂಕ್ಷನ್‌ನಲ್ಲಿ ಕೈ ಕೈ ಹಿಡಿದು ಓಡಾಡಿದ ವರ್ತೂರ್-ತನಿಷಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ತೂರ್ ಸಂತೋಷ್ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಬಿಗ್‌ಬಾಸ್ ಸ್ಪರ್ಧಿಗಳು ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದ್ದಾರೆ.

ಅದರಲ್ಲಿಯೂ ತನಿಷಾ ಹಾಗೂ ವರ್ತೂರು ಕೈ ಕೈ ಹಿಡಿದು ಓಡಾಡಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ತನಿಷಾ, ತುಕಾಲಿ ಸಂತೋಷ್ ಹಾಗೂ ನೀತು ಕಾರ್ಯಕ್ರಮಕ್ಕೆ ಆಗಮಿಸಿದ್ದರು, ಆದರೆ ತನಿಷಾ ಫುಲ್ ಮಿಂಚಿದ್ದು, ಇಬ್ಬರೂ ಕೈ ಹಿಡಿದುಕೊಂಡು ಮನೆಯ ಕಾರ್ಯಕ್ರಮ ನಡೆಸಿದ್ದಾರೆ. ವರ್ತೂರ್ ಸಂತೋಷ್ ತಮ್ಮ ಕುಟುಂಬಕ್ಕೆ ತನಿಷಾರನ್ನು ಪರಿಚಯ ಮಾಡಿಕೊಟ್ಟಿದ್ದಾರೆ.

ಫ್ಯಾನ್ಸ್ ಈ ವಿಡಿಯೋಗಳನ್ನು ತುಂಬಾ ಇಷ್ಟಪಟ್ಟಿದ್ದು, ಈಗಾಗಲೇ ತನಿಷಾ ವರ್ತೂರು ಮನೆಯ ಸೊಸೆಯಂತೆ ಕಾಣ್ತಿದ್ದಾರೆ ಎಂದಿದ್ದಾರೆ.

ಬಿಗ್‌ಬಾಸ್ ಮನೆಯಿಂದ ಆರಂಭವಾದ ಸಾಕಷ್ಟು ಲವ್‌ಸ್ಟೋರಿಗಳು ಮದುವೆಯಾಗಿ ಬದಲಾಗಿವೆ. ಇವರೂ ಕೂಡ ಅದೇ ಮಾಡಲಿ ಎಂದು ಫ್ಯಾನ್ಸ್ ಇಷ್ಟಪಡ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!