- ಮೇಘನಾ ಶೆಟ್ಟಿ ಶಿವಮೊಗ್ಗ
ಹುಡುಗ ನೋಡೋಕೆ ಬಂದು ಹೋದ್ಮೇಲೆ ಸ್ನೇಹಿತರ ಬಳಿ ಅವನ ಆನ್‌ಲೈನ್ ಪ್ರೊಫೈಲ್‌ಗಳನ್ನು ಚೆಕ್ ಮಾಡೋದಕ್ಕೆ ಹೇಳಿದ್ದಳು. ಅವನ ಪ್ರೊಫೈಲ್ ಹೇಗಿತ್ತು ಗೊತ್ತಾ? ಗುಡಿಸಿದ ಬಚ್ಚಲು ಮನೆ ಥರ, ಕ್ಲೀನ್, ಫುಲ್ ಕ್ಲೀನ್! ಸೋಪಿನ ಜಾಗದಲ್ಲಿ ಸೋಪು, ಶಾಂಪೂ ಜಾಗದಲ್ಲಿ ಶಾಂಪೂ, ಟಾಯ್ಲೆಟ್ ಕ್ಲೀನರ್ ಜಾಗದಲ್ಲಿ ಟಾಯ್ಲೆಟ್ ಕ್ಲೀನರ್. ಹೀಗೆ ಬಾತ್‌ರೂಮ್‌ನಲ್ಲಿ ಇರಬೇಕಾದ ಎಲ್ಲ ವಸ್ತು ಇತ್ತು, ಅದರ ಜಾಗದಲ್ಲೇ ಇತ್ತು.
ಓ ನಮ್ ಹುಡ್ಗ ಸೂಪರ್ ಅಂತ ಖುಷಿ ಆಗಿ ಮದುವೆ ಆದ್ಲು, ಮೊದಲಿಗೆ ಎಲ್ಲವೂ ಕ್ಲೀನ್ ಬಚ್ಚಲುಮನೆಯೇ, ಆಮೇಲೆ ಗೊತ್ತಾಗಿದ್ದು, ಅವನ ಕ್ಯಾರೆಕ್ಟರ್ ಕೊಳಕು ಅಂತ!
ಸಾಮಾಜಿಕ ಜಾಲತಾಣಗಳಲ್ಲಿ ಕಾಣೋದನ್ನೆಲ್ಲ ನಂಬೋದೂ ಕಷ್ಟ. ಅವಳದ್ದು ಎಷ್ಟು ಕ್ಲಿಯರ್ ಸ್ಕಿನ್ ಎಂದುಕೊಳ್ತೀರಿ, ಆದರೆ ಆಕೆ ಮೇಕಪ್ ಹಾಕಿ ಜೊತೆಗೆ ಫಿಲ್ಟರ‍್ಸ್ ಕೂಡ ಬಳಸಿರುತ್ತಾಳೆ.
ಸೋಶಿಯಲ್ ಮೀಡಿಯಾದಲ್ಲಿ ಜನ ನಮ್ಮ ಬಗ್ಗೆ ಏನು ತಿಳಿದುಕೊಳ್ಳಬೇಕು ಎಂದು ಭಾವಿಸ್ತೀವೋ ಅಷ್ಟನ್ನು ಮಾತ್ರ ತೋರಿಸ್ತೇವೆ, ನಿಜವಾದ ಜೀವನ ಬೇರೆಯೇ ಇದೆ. ಅದರಲ್ಲಿ ಇರುವುದೆಲ್ಲ ನಿಜ ಅಲ್ಲ, ಪ್ರತಿಯೊಬ್ಬರು ತಮ್ಮ ಜೀವನ ಪರ್ಫೆಕ್ಟ್, ನಮ್ಮ ಲವ್ ಲೈಫ್ ಸೂಪರ್ ಎಂದು ಪೋಸ್ಟ್ ಮಾಡುತ್ತಾರೆ.
ಆದರೆ ನಿಜ ಜೀವನದಲ್ಲಿಯೂ ಅವರು ಹಾಗೇ ಇರ‍್ತಾರೆ ಎಂದು ನಿಮಗೆ ಅನಿಸುತ್ತದೆಯಾ? ಖಂಡಿತಾ ಇಲ್ಲ. ಎಲ್ಲ ಗಂಡ ಹೆಂಡತಿಯೂ ಕಿತ್ತಾಡ್ತಾರೆ, ಸೆಲೆಬ್ರಿಟಿಗಳು ಕೂಡ. ಸಾಮಾಜಿಕ ಜಾಲತಾಣದಲ್ಲಿ ನೀವು ನೋಡೋದು ಸೋಶಿಯಲ್ ಇಮೇಜಿಂಗ್ ಅಷ್ಟೆ. ನಿಜ ಜೀವನ ಅಲ್ಲ.
ನಮಗೇ ಗೊತ್ತಿಲ್ಲದೆ ಸಾಮಾಜಿಕ ಜಾಲತಾಣಗಳು ನಮ್ಮನ್ನು ಬದಲಿಸುತ್ತವೆ. ಮನೆಯಲ್ಲಿ ನೆಮ್ಮದಿಯಾಗಿ ಕುಳಿತಿದ್ದವರಿಗೆ ಹೊರಗೆ ಹೋಗಬೇಕು, ಫೋಟೊ ತೆಗೆದು ಅಪ್‌ಲೋಡ್ ಮಾಡಬೇಕು ಎಂದು ಅನಿಸುತ್ತದೆ. ರೆಸ್ಟೋರೆಂಟ್‌ನಲ್ಲಿ ಗಂಟೆ ಗಟ್ಟಲೆ ಕಾದ ಊಟ ಬಂದ ನಂತರ ತಿನ್ನೋ ಬದಲು 10 ಆಂಗಲ್‌ನಲ್ಲಿ 10 ಫೋಟೊ ತೆಗೆಯುವಂತೆ ಮಾಡುತ್ತದೆ. ಸದ್ದಿಲ್ಲದೇ ಅಂದಕ್ಕೆ ಹೆಚ್ಚು ಪ್ರಾಮುಖ್ಯತೆ ಬರುತ್ತದೆ.
ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ Influencers influenceಗೆ ಒಳಗಾಗಬೇಡಿ. ಸಾಮಾಜಿಕ ಜಾಲತಾಣಗಳನ್ನು ಎಷ್ಟು ಬಳಕೆ ಮಾಡ್ತೀರಿ, ಅದರ ಉಪಯೋಗ ಏನು? ಎಷ್ಟು ಸಮಯ ವ್ಯರ್ಥವಾಗುತ್ತದೆ ಎನ್ನೋ ಬಗ್ಗೆ ಗಮನ ಇರಲಿ.
ಅತಿಯಾಗಿ ಸಾಮಾಜಿಕ ಜಾಲತಾಣ ಬಳಕೆ ಮಾಡದಿದ್ರೆ ಏನಾಗುತ್ತದೆ?
ನಿಮ್ಮ ನಿಜವಾದ ಗುರಿ ಮೇಲೆ ಫೋಕಸ್ ಮಾಡಬಹುದು.
ಸಿಕ್ಕಾಪಟ್ಟೆ ಫ್ರೀ ಟೈಮ್ ಸಿಗುತ್ತದೆ
ನಿಜವಾಗಿಯೂ ಸೋಶಿಯಲ್ ವ್ಯಕ್ತಿಗಳಾಗುತ್ತೀರಿ.
ಅವರಿವರ ಜೀವನದಲ್ಲಿ ಏನಾಗ್ತಿದೆ ಅಂತ ತಿಳಿದುಕೊಳ್ಳಬೇಕು ಅನ್ನೋ ಹುಚ್ಚು ಹೋಗುತ್ತದೆ.
ಮನೆಯ ಬಳಿ ಇರೋ ಸ್ನೇಹಿತರ ಭೇಟಿ ಸಾಧ್ಯತೆ
ಹೊಸ ಹಾಬಿಯೊಂದನ್ನು ಬೆಳೆಸಿಕೊಳ್ಳೋದಕ್ಕೆ ಸಮಯ ಸಿಗುತ್ತದೆ.
ಬರೀ ಸಾಮಾಜಿಕ ಜಾಲತಾಣದಲ್ಲಿಯೇ ಬ್ಯುಸಿಯಾಗಿದ್ರೆ ನಿಜ ಜೀವನ ಯಾವಾಗ ಮಾಡ್ತೀರಿ? ಕುಟುಂಬಕ್ಕೆ ಹೆಚ್ಚು ಸಮಯ ನೀಡಬಹುದು.
ಯಾರೋ ನಿಮ್ಮ ಖಾತೆ ಹ್ಯಾಕ್ ಮಾಡಿ ನಿಮ್ಮ ಹೆಸರು ಹಾಳು ಮಾಡಬಹುದು,
ಅಡಿಕ್ಷನ್ ಆಗುತ್ತದೆ, ಇದು ಅನಾರೋಗ್ಯಕರ