ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರಿ ವಿರೋಧ ಸೃಷ್ಟಿಸಿದ್ದ ಕೆರಗೋಡು ಹನುಮಧ್ವಜ ತೆರವು ವಿವಾದ ಇನ್ನೂ ಶಾಂತವಾದಂತೆ ಕಾಣುತಿಲ್ಲ. ಫೆ. 9ಕ್ಕೆ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಶ್ರೀರಾಮ ಭಜನಾ ಮಂಡಳಿ ಮಂಡ್ಯ ಜಿಲ್ಲೆ ಹಾಗೂ ಕೆರೆಗೋಡು ಬಂದ್‌ಗೆ ಕರೆ ನೀಡಿದೆ.
ಬಂದ್ ಮಾಡದಿರಲು ಜಿಲ್ಲಾಡಳಿತ ಎಷ್ಟೇ ಮನವಿ ಮಾಡಿದರು ಮಣೆ ಹಾಕದ ಹಿಂದೂಪರ ಸಂಘಟನೆಗಳಿಗೆ ಬಜರಂಗಸೇನೆ ಸೇರಿ ಹಲವು ಸಂಘಟನೆಗಳಿಂದ ಬಂದ್ ಗೆ ಬೆಂಬಲ ಸೂಚಿಸಲಾಗಿದೆ ಸೂಚಿಸಲಾಗಿದೆ.
ಫೆ. 7ರಂದು ಕರೆ ನೀಡಲಾಗಿದ್ದ ಬಂದ್ ಅನ್ನು ಮಂಡ್ಯ ಜಿಲ್ಲಾಡಳಿತದ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ಬಂದ್ ಅನ್ನು ಹಿಂಪಡೆದಿತ್ತು. ಆದರೆ ಇದೀಗ ಹಿಂದೂ ಹೋರಾಟಗಾರರ ಪಟ್ಟಿನಿಂದ ನಾಳೆ ಮತ್ತೆ ಮಂಡ್ಯ ಬಂದ್ ಬಹುತೇಕ ಖಚಿತ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಬಜರಂಗದಳ ಕರೆ ಕೊಟ್ಟ ಬಂದ್‌ಗೆ ಬಿಜೆಪಿ ಬೆಂಬಲ ಕೂಡ ಸಿಕ್ಕಿದೆ ಎನ್ನಲಾಗಿದೆ. ಇಂದು ಮಧ್ಯಾಹ್ನ ಈ ಕುರಿತು ಸಭೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.