ಹೊರನಾಡು ಭದ್ರಾ ತೀರದಲ್ಲಿ ತೇಲಿ ಬಂತು ಶವಗಳು, ಇದು ವಾಮಾಚಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊರನಾಡು ಭದ್ರಾ ನದಿ ತೀರದಲ್ಲಿ ವಾಮಾಚಾರ ಮಾಡಲಾಗಿದೆ. ನದಿ ದಡದಲ್ಲಿ ಪೂಜೆ ಮಾಡಿ ನಾಲ್ಕು ಕುರಿಗಳನ್ನು ಬಲಿ ಕೊಡಲಾಗಿದೆ.

ಕಳಸ-ಹೊರನಾಡು ಸಂಪರ್ಕಿಸುವ ಭದ್ರಾ ನದಿಯ ತೀರದಲ್ಲಿ ಕಿಡಿಗೇಡಿಗಳು ರಾತ್ರೋ ರಾತ್ರಿ ವಾಮಾಚಾರ ನಡೆಸಿದ್ದಾರೆ. ಬೆಳ್ಳಂಬೆಳಗ್ಗೆ ಇದನ್ನು ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಭದ್ರಾ ನದಿಯಲ್ಲಿ ಕೆಲ ದಿನಗಳಿಂದ ರಾತ್ರಿ ವಾಮಾಚಾರ ನಡೆಯುತ್ತಿದೆ ಎನ್ನುವ ಶಂಕೆ ವ್ಯಕ್ತವಾಗಿತ್ತು. ಅಂತೆಯೇ ಇಂದು ಬೆಳಗ್ಗೆ ನದಿಯಲ್ಲಿ ನಾಲ್ಕು ಕುರಿಗಳ ತಲೆ ತೇಲಿರುವುದು ಕಂಡುಬಂ
ದಿದೆ. ಇದನ್ನು ವೀಕ್ಷಿಸಿದ ಸ್ಥಳೀಯರು ಹಾಗೂ ಪ್ರವಾಸಿಗರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳಸ ಹೊರನಾಡು ಸಂಪರ್ಕಿಸುವ ಹೆಬ್ಬಾಳೆ ಸೇತುವೆ ಬಳಿ ಕಳೆದ ಎರಡು ದಿನದಿಂದ ನಿರಂತರವಾಗಿ ಭದ್ರಾ ನದಿಯ ತೀರದಲ್ಲಿ ವಾಮಾಚಾರ ಮಾಡಲಾಗುತ್ತಿದೆ. ಭದ್ರಾ ನದಿಯಲ್ಲಿ ನಾಲ್ಕು ಕುರಿಗಳು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ದಡದಲ್ಲಿ ಅರಿಶಿಣ, ಕುಂಕುಮ,ಕೂದಲು, ಉಗುರು, ಮಣ್ಣಿನ ಬೊಂಬೆಗಳು, ರಕ್ತ, ಬಟ್ಟೆ, ಮಡಕೆ ಕಾಣಿಸಿದೆ. ನರಬಲಿ ನಡೆಸಿ ಕುರಿಗಳ ಮೃತದೇಹವನ್ನು ನದಿಗೆ ಎಸೆದಿರಬಹುದು ಎನ್ನಲಾಗಿದೆ. ಇದೀಗ ಪೊಲೀಸರು ಕುರಿಗಳ ಮೃತದೇಹವನ್ನು ಹೊರಕ್ಕೆ ತೆಗೆದಿದ್ದು, ವಾಮಾಚಾರ ಮಾಡಿದವರ ಹುಡುಕಾಟ ಆರಂಭಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!