ಹೊಸದಿಗಂತ, ಹುಬ್ಬಳ್ಳಿ:
ಇತ್ತೀಚೆಗೆ ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹು- ಧಾ ಮಹಾನಗರ ಬಿಜೆಪಿ ವತಿಯಿಂದ ಪತ್ರ ಬರೆದು ಅಭಿನಂದನೆ ಸಲ್ಲಿಸುವ ಅಭಿಯಾನಕ್ಕೆ ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಚಾಲನೆ ನೀಡಿದರು.
ಗುರುವಾರ ಮೂರು ಸಾವಿರ ಮಠದ ಆವರಣದಲ್ಲಿ ಶ್ರೀಗಳು ಸ್ವತಃ ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಹು- ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಅವರ ನೇತೃತ್ವದಲ್ಲಿ ಅಭಿನಂದ ಅಭಿಯಾನ ಪ್ರಾರಂಭವಾಯಿತು. ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜೈ ಶ್ರೀರಾಮ ಎಂದು ಘೋಷಣೆ ಕೂಗಿದರು.
ಬಳಿಕ ಮಾತನಾಡಿದ ಶ್ರೀಗಳು, ದೇಶದ ಭಾವನಾತ್ಮಕ ಮಂದಿರ ಉದ್ಘಾಟನೆ ಮಾಡಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುವುದು ದೇಶದ ಜನರ ಆದ್ಯ ಕರ್ತವ್ಯ ಆಗಿದೆ. ಈ ಅಭಿಯಾನದಲ್ಲಿ ನಾನು ಸಹ ಭಾಗಹಿಸಿದ್ದು, ಸಂತಸ ಮೂಡಿಸಿದೆ ಎಂದರು.
ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಪ್ರಧಾನಿ ಮೋದಿ ಅವರಿಂದ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಹಾಗೂ ಬಾಲ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಆದ್ದರಿಂದ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಅಭಿನಂದ ಪತ್ರ ಅಭಿಯಾನ ಮಾಡಲಾಗುತ್ತಿದೆ ಎಂದರು.
ಒಂದು ವಾರ ನಡೆಯುವ ಪತ್ರ ಅಭಿನಂದನಾ ಅಭಿಯಾನದಲ್ಲಿ ಸುಮಾರು 50 ಸಾವಿರ ಜನರು ಪತ್ರ ಬರೆದು ಅಂಚೆಯ ಮೂಲಕ ಪ್ರಧಾನಿ ಅವರಿಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು. ಹು- ಧಾ ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭುನವಲಗುಂದ ಮಠ, ಡಾ. ಕ್ರಾಂತಿ ಕಿರಣ, ರಂಗಾ ಬದ್ದಿ, ಶಿವು ಮೆಣಸಿನಕಾಯಿ, ದತ್ತ ಮೂರ್ತಿ ಕುಲ ರಾಜು ಜರತಾರಘರ, ವೀರೇಶ ಸಂಗಳದ, ಕೃಷ್ಣಾ ಜಿ., ಉಮೇಶ ದೂಶಿ, ಭಾರತಿ ಯಳಖಾನ, ಸವೀತಾ ಚವ್ಹಾಣ ಉಪಸ್ಥಿತರಿದ್ದರು.