HEALTH | ಆರು ಗಂಟೆಗೆ ಊಟ ಮಾಡಿ, ಸ್ನ್ಯಾಕ್ಸ್ ಅಲ್ಲ! Early dinnerನಿಂದ ಏನೆಲ್ಲಾ ಲಾಭ?

ಗಂಟೆ ಆರಾಯ್ತು, ಪಾನಿಪುರಿನಾ ಅಥವಾ ಬಿಸಿ ಬಿಸಿ ಬಜ್ಜಿ ತಿಂದುಬಿಡೋದ? ಬೇಡ ಯಾವುದಾದರೂ ಫ್ಯಾನ್ಸಿ ರೆಸ್ಟೋರೆಂಟ್‌ಗೆ ಹೋಗಿ ಬಿಸಿ ಬಿಸಿ ಪಿಝಾನೋ ಪಾಸ್ತಾನೋ ತಿಂದುಬಿಡೋಣ. ಈ ಕಡೆ ಚಳಿ ಚಳಿ ವೆದರ್ ಆ ಕಡೆ ಬಿಸಿ ಬಿಸಿ ಸ್ನ್ಯಾಕ್ಸ್..

ಹೌದು, ಇದೆಲ್ಲಾ ಒಳ್ಳೆ ಫೀಲಿಂಗ್ ಒಪ್ಪೋಣ, ಆದರೆ ಆರೋಗ್ಯಕ್ಕೆ ಒಳ್ಳೆಯದಾ? ಯಾವಾಗೋ ಒಮ್ಮೆ ಆದ್ರೆ ಎಲ್ಲವೂ ಒಕೆ, ಆದರೆ ದಿನವೂ ಇದೇ ರೊಟೀನ್ ನಿಮ್ಮದಾಗಿದ್ರೆ ಬದಲಾಯಿಸಿ. ಆರು ಗಂಟೆಗೆ ಸ್ನ್ಯಾಕ್ಸ್ ತಿಂದು ೯ ಗಂಟೆಗೆ ಊಟ ಮಾಡೋ ಅಭ್ಯಾಸ ಬಿಟ್ಟುಬಿಡಿ. ಸಂಜೆ ಹಸಿವಾದ ತಕ್ಷಣ ಊಟ ಮಾಡಿಬಿಸಿ, ಮುಗೀತಲ್ಲ, ಹಸಿವು ಹೋಗುತ್ತದೆ, ಹಾಗೇ ಜಂಕ್ ತಿಂದ ಹಾಗೂ ಆಗೋದಿಲ್ಲ.

ಬೇಗ ಊಟ ಮಾಡಿದ್ರೆ ಏನೆಲ್ಲಾ ಲಾಭ ನೋಡಿ..
ತೂಕ ಇಳಿಯುತ್ತದೆ
ಬೊಜ್ಜು ಬರುವ ಸಾಧ್ಯತೆ ಕಡಿಮೆ
ಮೂಡ್ ಹಾಗೂ ಎನರ್ಜಿ ಚೆನ್ನಾಗಿರುತ್ತದೆ
ಜೀರ್ಣಕ್ರಿಯೆ ಸುಲಭ
ಒಳ್ಳೆ ನಿದ್ದೆ ನಿಮ್ಮದಾಗುತ್ತದೆ
ಹೃದಯ ಆರೋಗ್ಯವಾಗಿರುತ್ತದೆ
ಬ್ಲಡ್ ಶುಗರ್ ಲೆವೆಲ್ ಹಿಡಿತದಲ್ಲಿರುತ್ತದೆ
ಅತಿಯಾಗಿ ತಿನ್ನೋದು ತಪ್ಪುತ್ತದೆ
ನ್ಯೂಟ್ರಿಯಂಟ್ಸ್ ದೇಹ ಹಿಡಿದಿಟ್ಟುಕೊಳ್ಳುತ್ತದೆ.
ಗ್ಯಾಸ್ಟ್ರಿಕ್ ಆಗೋದಿಲ್ಲ
ಒತ್ತಡ ನಿವಾರಣೆ
ಬೆಳಗ್ಗೆ ಸೂಪರ್ ಎನರ್ಜಿ ನಿಮ್ಮದಾಗಿರುತ್ತದೆ

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!