ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೇಸ್‌ಬುಕ್ ಲೈವ್‌ನಲ್ಲಿ ಇದ್ದಾಗಲೇ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಅಭಿಷೇಕ್ ಘೋಸಲ್ಕರ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಈ ಘಟನೆ ಭಾರೀ ಸಂಚಲನ ಮೂಡಿಸಿದೆ. ಘೋಸಲ್ಕರ್ ಮುಂಬೈನಲ್ಲಿ ಫೇಸ್‌ಬುಕ್ ಲೈವ್ ವೇಳೆ ಈ ಘಟನೆ ನಡೆದಿದ್ದು, ಅವರು ಮಾತುಕತೆ ಮುಗಿಸಿ ಮೇಲೆದ್ದೇಳುತ್ತಿದ್ದಂತೆಯೇ ಗುಂಡಿನ ದಾಳಿ ನಡೆದಿದೆ. ಆರೋಪಿ ಮೌರಿಸ್ ನೊರೊನ್ಹೊ ಕೂಡ ಅಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಅಭಿಷೇಕ್ ಹೊಟ್ಟೆ ಹಾಗೂ ಭುಜಕ್ಕೆ ಆರೋಪಿ ಗುಂಡಿಟ್ಟಿದ್ದಾನೆ. ಆರೋಪಿ ಮೌರಿಸ್ ನೊರೊನ್ಹಾ ಹಾಗೂ ಅಭಿಷೇಕ್ ನಡುವೆ ದ್ವೇಷವಿತ್ತು ಎಂದು ಹೇಳಲಾಗಿದೆ. ಮುಂಬೈ ಕ್ರೈಂ ಬ್ರ್ಯಾಂಚ್ ತನಿಖೆ ನಡೆಸುತ್ತಿದೆ.