ಜಮ್ಮು, ಕಾಶ್ಮೀರದಲ್ಲಿ ಭಯೋತ್ಪಾದಕರ ಅಡಗುತಾಣ ಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

 

ಜಮ್ಮು, ಕಾಶ್ಮೀರದಲ್ಲಿ ಭದ್ರತಾ ಪಡೆ ಅಧಿಕಾರಿಗಳು ಎರಡು ಭಯೋತ್ಪಾದಕರ ಅಡಗುತಾಣಗಳನ್ನು ಪತ್ತೆ ಮಾಡಿದ್ದು, ಉಗ್ರರ ಬಳಿ ಇದ್ದ ಶಸ್ತ್ರಾಸ್ತ್ರ, ಮದ್ದುಗುಂಡುಗಳ ಸಂಗ್ರಹವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇಬ್ಬರು ಶಂಕಿತ ಭಯೋತ್ಪಾದಕ ಸಹಚರರನ್ನು ಶೋಧ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಭಯೋತ್ಪಾದಕ ಕಮಾಂಡರ್ ಅಬ್ದುಲ್ ಕಯೂಮ್ ನಜರ್, ಅಬ್ದುಲ್ ರಶೀದ್ ನಜರ್ ಬಂಧಿತ ಉಗ್ರರು.

ಶೋಧ ಕಾರ್ಯಾಚರಣೆಯ ವೇಳೆ ರಶೀದ್ ಹಾಗೂ ಅಬ್ದುಲ್ ಅವರ ವಸತಿ ಗೃಹದಲ್ಲಿ ಅಡಗುತಾಣ ಪತ್ತೆಯಾಗಿದೆ ಎನ್ನಲಾಗಿದೆ. ಇದರಿಂದ ಶಸ್ತ್ರಾಸ್ತ್ರ, ಮದ್ದುಗುಂಡು, ಐಇಡಿಗಳು, ಪಿಸ್ತೂಲ್, ಜೀವಂತ ಮದ್ದುಗುಂಡುಗಳನ್ನು  ಭದ್ರತಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!