Sunday, January 11, 2026

ಪ್ರೀತಿ ನಿರಾಕರಿಸಿದ್ದೇ ತಪ್ಪಾಯ್ತೇ? ಮಹಿಳೆಯ ಕುತ್ತಿಗೆಗೆ ಇರಿದು ಭೀಕರ ಕೊಲೆ, ಆರೋಪಿ ಪರಾರಿ

ಹೊಸದಿಗಂತ ಯಲ್ಲಾಪುರ:

ಪಟ್ಟಣದ ಕಾಳಮ್ಮನಗರದಲ್ಲಿ ವ್ಯಕ್ತಿಯೊಬ್ಬ ವಿವಾಹಿತ ಮಹಿಳೆಯ ಕುತ್ತಿಗೆಗೆ ಹರಿತವಾದ ಆಯುಧದಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.


ಪತಿಗೆ ವಿಚ್ಛೇದನ ನೀಡಿದ್ದ ರಂಜಿತಾ ಮಲ್ಲಪ್ಪ ಬನ್ಸೋಡೆ(30) ಪಟ್ಟಣ ದ ರಾಮಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದಳು.ಕೆಲಸ ಮುಗಿಸಿ ಮಧ್ಯಾಹ್ನ ಮನೆಗೆ ಬರುತ್ತಿದ್ದಾಗ ಕಾಳಮ್ಮ ನಗರದಲ್ಲಿ ಅವಳ ಕ್ಲಾಸ ಮೆಟ್ ಆಗಿದ್ದ ಪರಿಚಿತ ವ್ಯಕ್ತಿ ರಫೀಕ್ ಇಮಾಮಸಾಬ ಏಳ್ಳುರು (30) ಹರಿತವಾದ ಆಯುಧದಿಂದ ಅವಳ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.


ಮೃತ ಪಟ್ಟ ಮಹಿಳೆ ಗೆ 10 ವರ್ಷದ ಮಗನಿದ್ದಾನೆ.ರಂಜಿತಾ ಹಾಗೂ ಆರೋಪಿ ರಫೀಕ್‌ಗೆ ಮಹಿಳೆಗೆ ಮದುವೆ ಯಾಗುವಂತೆ ಪೀಡಿಸುತ್ತಿದ್ದನುಅವಳು ನಿರಾಕರಿಸಿಅವನೊಡನೆ ಮಾತನಾಡುವದನ್ನು ಬಿಟ್ಟಿದ್ದಳು. ಅದೇ ಸಿಟ್ಟಿನಲ್ಲಿ ಶನಿವಾರ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ವಾದವಿವಾದ ನಡೆದು ಆರೋಪಿ ರಫಿಕ್ ಮಹಿಳೆಗೆ ಇರಿದು ಕೊಲೆ ಮಾಡಿ ಅರಣ್ಯ ದೊಳಗೆ ಓಡಿ ಪರಾರಿಯಾಗಿದ್ದಾನೆ.


ಚಾಕು ಇರಿತಕ್ಕೆ ಗಂಭೀ ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಸರಕಾರಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಸುಶಿಷ್ಠ ಗಣಾಚಾರಿ ಇವರು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ಹುಬ್ಬಳ್ಳಿಗೆ ಕರೆದೋಯ್ಯು ತ್ತಿರುವಾಗ ಮಾರ್ಗ ಮಧ್ಯೆ ಮೃತ ಪಟ್ಟಿದ್ದಾಳೆ.ಈ ಕುರಿತು ಅವಳ ಸೋದರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

error: Content is protected !!