ಸಾಮಾನ್ಯವಾಗಿ ಮಲಗುವಾಗ ಕೆಲವರು ಕೂದಲು ಬಿಟ್ಟು ಮಲಗ್ತಾರೆ, ಕೆಲವರು ಬನ್, ಇನ್ನೂ ಕೆಲವರು ಎರಡು ಜಡೆ ಹಾಕಿಕೊಂಡು ಮಲಗ್ತಾರೆ, ನಮ್ಮ ಕೂದಲನ್ನು ಸುರಕ್ಷಿತವಾಗಿಡುವ ಹೇರ್‌ಸ್ಟೈಲ್ ಯಾವ್ದು?
ಎಲ್ಲರೂ ಅತಿ ಹೆಚ್ಚು ಬಳಸುವ ಜಡೆ ಸ್ಟೈಲ್ ಕೂದಲಿಗೆ ಸೇಫೆಸ್ಟ್. ಇದರಿಂದ ಏನು ಲಾಭ?
- ಕೂದಲು ಸಿಕ್ಕಾಗೋದಿಲ್ಲ
- ಫ್ರಿಝಿಯಾಗೋದಿಲ್ಲ
- ಜಡೆಯಿಂದ ಕೂದಲಿನ ಮಾಯಿಶ್ಚರ್ ಲಾಕ್ ಆಗುತ್ತದೆ
- ದುಬಾರಿ ಟ್ರೀಟ್‌ಮೆಂಟ್‌ಗಳಿಗಿಂತ ರಾತ್ರಿ ಜಡೆ ಹಾಕಿಕೊಂಡು ಮಲಗೋದು ಸುಲಭ
- ಕೂದಲು ತುದಿಯಲ್ಲಿ ಎರಡು ಎರಡಾಗುವ ಸ್ಪ್ಲಿಟ್ ಎಂಡ್ಸ್ ಕಡಿಮೆಯಾಗುತ್ತದೆ
- ಜಡೆಯಲ್ಲೇ ವೆರೈಟಿ ಹೇರ್‌ಸ್ಟೈಲ್ ಇರುವುದರಿಂದ ಸುಂದರವಾಗೂ ಕಾಣ್ತೀರಿ
- ಬಿಸಿಲಿನಿಂದ, ಧೂಳಿನಿಂದ ಕೂದಲನ್ನು ರಕ್ಷಣೆ ಮಾಡಬಹುದು