ರಾಜ್ಯ ಬಜೆಟ್ | ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಅವಮಾನ: ಅನಂತಮೂರ್ತಿ ಹೆಗಡೆ

ಹೊಸದಿಗಂತ ವರದಿ,ಶಿರಸಿ:

ಉಸ್ತುವಾರಿ ಸಚಿವ ಮಂಕಾಳ ವೈದ್ಯರ ಸರ್ಕಾರ ಜಿಲ್ಲೆಯ ಜನರಿಗೆ ಅವಮಾನ ಮಾಡಿದೆ ,ಉತ್ತರ ಕನ್ನಡದ ಜನ ನಿಮ್ಮನ್ನು ಯಾವತ್ತೂ ಕ್ಷಮಿಸುವುದಿಲ್ಲ, ನಮ್ಮ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ. ಇದರ ಪರಿಣಾಮ ಮುಂದಿನ ದಿನದಲ್ಲಿ ನೋಡುವಿರಿ.ಜನರಿಗೆ ಅಸ್ಪತ್ರೆ ಕೊಡಿಸಲು ವಿಫಲರಾದ ತಾವು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರ ಬಂದು 9 ತಿಂಗಳಾದರೂ ಅಸ್ಪತ್ರೆ ಬಗ್ಗೆ ಒಂದೇ ಒಂದು ಸಭೆ ಇಲ್ಲ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಘೋಷಣೆಯಾಗಿದ್ದ ಆಸ್ಪತ್ರೆಗೆ ಹಣ ಬಿಡುಗಡೆ ಇಲ್ಲ, ತಮಗೆ ಲಾಭ ಆಗುವ ಯೋಜನೆಗೆ ಸಾವಿರಾರು ಕೋಟಿ ಕೊಡುತ್ತೀರಿ, ಆಸ್ಪತ್ರೆಗೆ ಒಂದು ರೂಪಾಯಿ ಕೂಡ ಇಲ್ಲ, ಅಲ್ಲಿಗೆ ಸರ್ಕಾರಕ್ಕೆ ಮನುಷ್ಯತ್ವ ಇಲ್ಲ ಅಂತ ನಮಗೆ ಮನವರಿಕೆಯಾಗಿದೆ. ಜನ ರಕ್ತದ ಮಡುವಿನಲ್ಲಿ ರಸ್ತೆ ಮೇಲೆ ಬಿದ್ದು ಒದ್ದಾಡುವಾಗ ಪಡುವ ನೋವು, ಅಸ್ಪತ್ರೆಗಾಗಿ ಮಂಗಳೂರಿಗೆ ಹೋಗುವಾಗ ಪಡುವ ಕಷ್ಟ, ನಿಮ್ಮ ಸರಕಾರಕ್ಕೆ ಶಾಪ ಹಾಕದೇ ಬಿಡುವುದಿಲ್ಲ ಎಂದಿದ್ದಾರೆ.

ಇಷ್ಟು ಹೋರಾಟ ಆದರೂ ಒಂದೇ ಒಂದು ಮಾತನಾಡದ ನೀವು ಶಾಸಕರಾಗಿ ಆಯ್ಕೆಯಾದರೆ ಸ್ವಂತ ಹಣದಿಂದ ಅಸ್ಪತ್ರೆ ಮಾಡುತ್ತೇನೆ ಎಂದು ಸೀರಿಯಸ್ಸಾಗಿ ಹೇಳಿದ್ದೀರಾ ಅಥವಾ ತಮಾಷೆ ಮಾಡಿದ್ದೀರಾ? ಮುಂದಿನ ದಿನದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮದಲ್ಲಿ ಓಡಾಡಿ ಜನಾಂದೋಲನ ಮಾಡಿ, ನಿಮ್ಮ ರಾಜೀನಾಮೆ ಮತ್ತು ಆಸ್ಪತ್ರೆ ನಿರ್ಮಾಣಕ್ಕೆ ಹೋರಾಟ ಮಾಡುತ್ತೇವೆ.ನಾನು ಏಕಾಂಗಿ ಅಲ್ಲ, ನನ್ನ ಜೊತೆ ಸಾವಿರಾರು ಬಿಸಿ ರಕ್ತದ ಯುವಕರಿದ್ದಾರೆ , ಮುಂದಿನ ದಿನ ಜನರ ಆಕ್ರೋಶದ ಪರಿಣಾಮ ಎದುರಿಸಬೇಕಾದೀತು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!