ಜಗತ್ತಿನಲ್ಲಿ ಇದು ಮೊದಲು: ಗ್ರೀಸ್‌ ನಲ್ಲಿ ಸಲಿಂಗ ವಿವಾಹಕ್ಕೆ ಅನುಮತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೀಸ್‌ನಲ್ಲಿ (Greece) ಸಲಿಂಗ ವಿವಾಹವನ್ನು (Same-Sex Marriage) ಕಾನೂನುಬದ್ಧಗೊಳಿಸಲಾಗಿದೆ.ಈ ಮೂಲಕ ಸಲಿಂಗ ವಿವಾಹ ಮಾನ್ಯಗೊಳಿಸಿದ ಜಗತ್ತಿನ ಮೊದಲ ದೇಶವಾಗಿ ಗ್ರೀಸ್‌ ಹೊರಹೊಮ್ಮಿದೆ.

ಸಂಸತ್ತಿನಲ್ಲಿ, ಸಲಿಂಗ ದಂಪತಿಯು ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಕಾನೂನುಬದ್ಧವಾಗಿ ಅನುಮತಿಸಲಾಗಿದೆ. ಈ ಹೊಸ ಕಾನೂನು ಅಸಮಾನತೆಯನ್ನು ನಿರ್ಮೂಲನೆ ಮಾಡುತ್ತದೆ ಎಂದು ಪ್ರಧಾನ ಮಂತ್ರಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ತಿಳಿಸಿದ್ದಾರೆ.

ಈ ಕಾನೂನಿಗೆ ಆರ್ಥೊಡಾಕ್ಸ್‌ ಚರ್ಚ್‌ ನೇತೃತ್ವದಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಇದರ ವಿರುದ್ಧ ಅಥೆನ್ಸ್‌ನಲ್ಲಿ ಪ್ರತಿಭಟನಾ ರ‍್ಯಾಲಿ ಕೂಡ ನಡೆಸಲಾಗಿದೆ. ರಾಜಧಾನಿಯ ಸಿಂಟಾಗ್ಮಾ ಸ್ಕ್ವೇರ್‌ನಲ್ಲಿ ಅನೇಕರು ಬ್ಯಾನರ್‌, ಶಿಲುಬೆ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಬೈಬಲ್‌ ಸಾಲುಗಳನ್ನು ಸಹ ವಾಚಿಸಿದ್ದಾರೆ.

ಇದೀಗ 300 ಸದಸ್ಯ ಬಲದ ಸಂಸತ್ತಿನಲ್ಲಿ ಮಸೂದೆ ಅಂಗೀಕಾರವಾಗಲು ಸರಳ ಬಹುಮತದ ಅಗತ್ಯವಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!