ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನ್ನದಾತರು ಬೃಹತ್ ಸಂಖ್ಯೆಯಲ್ಲಿ ನಡೆಸುತ್ತಿರಿವ ದೆಹಲಿ ಪ್ರತಿಭಟನೆ ವೇಳೆ ಈಗಾಗಲೇ ರೈತರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಿನ್ನೆ ತಡರಾತ್ರಿ ಓವರ್ ಡ್ಯೂಟಿ ಮಾಡಿದ್ದ ಸಬ್‌ಇನ್ಸ್‌ಪೆಕ್ಟರ್ ಮೃತಪಟ್ಟಿದ್ದಾರೆ.
ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಒಂದು ವಾರದಿಂದ ಹರಿಯಾಣ ಪೊಲೀಸ್ ಕಷ್ಟಪಟ್ಟು ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ತವ್ಯ ನಿರತ ಇನ್ಸ್‌ಪೆಕ್ಟರ್ ಆರೋಗ್ಯದಲ್ಲಿ ಏರು ಪೇರಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹೀರಾಲಾಲ್ ಮೃತಪಟ್ಟಿದ್ದಾರೆ. ಹೀರಾಲಾಲ್ ಅವರ ನಿಧನಿಂದ ಪೊಲೀಸ್ ಪಡೆಗೆ ನಷ್ಟವಾಗಿದೆ, ಅವರೊಬ್ಬ ಅದ್ಭುತ ಅಧಿಕಾರಿ ಎಂದು ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಹೇಳಿದ್ದಾರೆ.