WHY? | ಬೆಳಗ್ಗೆ ಕೇಳಿದ ಹಾಡನ್ನು ದಿನವಿಡೀ ಗುನುಗೋದ್ಯಾಕೆ ? ಇದಕ್ಕೂ ಅರ್ಥ ಇದೆ..

ಗಮನಿಸಿದ್ದೀರಾ? ಬೆಳಗ್ಗೆ ಎದ್ದ ನಂತರ ಯಾರಾದ್ರೂ ಯಾವುದಾದ್ರೂ ಹಾಡು ಹಾಡಿದ್ರೆ ನಿರಂತರವಾಗಿ ಆ ಹಾಡು ನಿಮ್ಮ ತಲೆಯಲ್ಲಿ ಪ್ಲೇ ಆಗ್ತಾನೆ ಇರತ್ತೆ.

ಕೆಲವರಿಗೆ ಬೇರೆ ಹಾಡನ್ನು ಕೇಳಿದ್ರೂ, ಮೊದಲು ಕೇಳಿದ ಹಾಡಿನಿಂದ ಹೊರಬರೋಕೆ ಆಗೋದಿಲ್ಲ. ಸುಮ್ಮನೆ ಹಾಡನ್ನು ಗುನುಗುತ್ತಾ ಇರೋಣ ಎನಿಸುತ್ತದೆ. ಈ ರೀತಿ ಆಗೋದ್ಯಾಕೆ?

ನಮ್ಮ ಮೆದುಳು ಆ ಹಾಡಿನ ಜೊತೆಗಿರೋ ನೆನಪನ್ನು ಅಚ್ಚಾಗಿಟ್ಟಿಸಿಕೊಂಡಿರುತ್ತದೆ. ಇದರ ಜೊತೆಗೆ ಕೆಲವರಿಗೆ ಇಯರ್‌ವರ್ಮ್ ಸಮಸ್ಯೆ ಇರಬಹುದು. ಇದರಿಂದ ಬೇಕಂದ್ರೂ ಆ ಹಾಡನ್ನು ಮರೆಯೋಕಾಗೋದಿಲ್ಲ. ಪದೇ ಪದೆ ನಿಮ್ಮ ಮೆದುಳು ಅದೇ ಹಾಡನ್ನು ಹೇಳುವಂತೆ ಮಾಡುತ್ತದೆ. ಇದು ಕೆಲವೇ ಗಂಟೆಗಳು ಇದ್ದರೆ ಪರವಾಗಿಲ್ಲ. ದಿನಗಟ್ಟಲೆ, ತಿಂಗಳುಗಟ್ಟಲೆ ಇದ್ದರೆ ಎಷ್ಟೂ ಅಂತ ಅದೇ ಹಾಡು ಹೇಳೋದು!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!