ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ ಪ್ರಯಾಣಿಕರ ಅಂಕಿ ಅಂಶವನ್ನು ದುಬೈ ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತೀಯ ಪ್ರಯಾಣಿಕರಿಗೆ ಅಗ್ರಸ್ಥಾನ ಸಿಕ್ಕಿದೆ!
ಈ ಅಂಕಿ ಅಂಶಗಳ ಪ್ರಕಾರ 2023ನೇ ಸಾಲಿನಲ್ಲಿ ದುಬೈ ನಿಲ್ದಾಣದ ಮೂಲಕ ಸಂಚರಿಸಿದ ಭಾರತೀಯ ಪ್ರಯಾಣಿಕರ ಸಂಖ್ಯೆ 1.19 ಕೋಟಿಯನ್ನು ದಾಟಿದೆ. ಈ ಅವಧಿಯಲ್ಲಿ ಒಟ್ಟು 8.69ಕೋಟಿ ಮಂದಿ ಈ ನಿಲ್ದಾಣದ ಮೂಲಕ ಪ್ರಯಾಣಿಸಿದ್ದಾರೆ.
ಉಳಿದಂತೆ 67 ಲಕ್ಷ ಪ್ರಯಾಣಿಕರ ಸಂಖ್ಯೆಯ ಮೂಲಕ ಸೌದಿ ಅರೇಬಿಯಾ ಎರಡನೇ ಸ್ಥಾನದಲ್ಲಿದೆ. ಇನ್ನು ಬ್ರಿಟನ್‌ನ 59 ಲಕ್ಷ, ಪಾಕಿಸ್ತಾನದ 42 ಲಕ್ಷ, ಅಮೆರಿಕದ 36 ಲಕ್ಷ, ರಷ್ಯಾದ 25 ಲಕ್ಷ ಹಾಗೂ ಜರ್ಮನಿ 25 ಲಕ್ಷ ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಹಾದುಹೋಗಿದ್ದಾರೆ.