ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಹಗಲು ಕೆಲಸ ಮಾಡುವವರ ಕೆಲಸದ ಸಮಯವನ್ನು ಮರು ನಿಗದಿ ಮಾಡಲಾಗಿದೆ.
ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಸಮಯವನ್ನು ಏ.30ರವರೆಗೆ ಮರು ನಿಗದಿ ಮಾಡಲಾಗಿದ್ದು, ಬೆಳಿಗ್ಗೆ 7 ರಿಂದ ಸಂಜೆ 7 ರವರೆಗಿನ ಕೆಲಸದ ಸಮಯವನ್ನು ಎಂಟು ಗಂಟೆಗಳೆಂದು ನಿಗದಿ ಪಡಿಸಲಾಗಿದೆ. ಅಲ್ಲದೆ ಹಗಲು ಕೆಲಸ ಮಾಡುವವರಿಗೆ ಮಧ್ಯಾಹ್ನ 12 ರಿಂದ 3ರವರೆಗೆ ವಿಶ್ರಾಂತಿ ನೀಡಬೇಕು.
ಶಿಫ್ಟ್ ವ್ಯವಸ್ಥೆಯಲ್ಲಿರುವವರಿಗೆ, ಪಾಳಿಯು ಮಧ್ಯಾಹ್ನ 12 ಗಂಟೆಗೆ ಮುಗಿದು ಮಧ್ಯಾಹ್ನ 3 ಗಂಟೆಗೆ ಪುನರಾರಂಭವಾಗುವಂತೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
ಆಲಪ್ಪುಳ, ಕೊಟ್ಟಾಯಂ, ತ್ರಿಶೂರ್, ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ತಾಪಮಾನವು ಗರಿಷ್ಠ 37 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ಸಾಧ್ಯತೆಯಿದ್ದು, ಎರ್ನಾಕುಳಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಗರಿಷ್ಠ 36 ಡಿಗ್ರಿ ತಾಪಮಾನ ಇರಲಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ.