ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಹಿಂದೆ 15 ವರ್ಷಗಳಿದ್ದ ಡೀಸೆಲ್ ಆಟೋ ರಿಕ್ಷಾಗಳ ಮಾನ್ಯತಾ ಅವಧಿಯನ್ನು 22 ವರ್ಷಗಳಿಗೆ ವಿಸ್ತರಿಸಿ ಕೇರಳ ಸರ್ಕಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಖಾಸಗಿ ಬಸ್‌ಗಳ ಅವಧಿ 22 ವರ್ಷಗಳಾಗಿದ್ದು, ನಮಗೂ ಇದೇ ಅವಧಿಯನ್ನು ನೀಡಬೇಕು ಎಂದು ಆಟೋ ಕಾರ್ಮಿಕರು ಆಗ್ರಹಿಸಿದ್ದರು. ಈ ಆಗ್ರಹವನ್ನು ಸರ್ಕಾರ ಮಾನ್ಯ ಮಾಡಿದೆ. ಇನ್ನು 22 ವರ್ಷ ಪೂರೈಸಿದ ಡೀಸೆಲ್ ಆಟೋ ರಿಕ್ಷಾಗಳನ್ನು 2024ರ ಜನವರಿ 1 ರಿಂದ ಜಾರಿಗೆ ಬರುವಂತೆ ಎಲೆಕ್ಟ್ರಿಕ್, ಎಲ್‌ಪಿಜಿ, ಸಿಎನ್‌ಜಿ ಅಥವಾ ಎಲ್‌ಎನ್‌ಜಿಗೆ ಪರಿವರ್ತಿಸಿದರೆ ಮಾತ್ರ ಕಾರ್ಯನಿರ್ವಹಿಸಬಹುದಾಗಿದೆ.