ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಪೊಲೀಸ್ ತಪಾಸಣೆ ನಡೆಸುತ್ತಿದ್ದ ವೇಳೆ ಕಾರು ಚಾಲಕನೊಬ್ಬ ಪೊಲೀಸ್ ಅಧಿಕಾರಿಯ ಎದುರು ಮೊಂಡಾಟ ನಡೆಸಿರುವ ಘಟನೆ ನಡೆದಿದೆ.
ತಪಾಸಣೆ ವೇಳೆ ಪರಾರಿಯಾಗುತ್ತಿದ್ದ ಕಾರನ್ನು ಪೊಲೀಸ್ ಅಧಿಕಾರಿಗಳು ಹಿಂಬಾಲಿಸಿದಾಗ, ಚಾಲಕ ಕಾರನ್ನು ತಪ್ಪು ದಿಕ್ಕಿನಲ್ಲಿ ಓಡಿಸಿದ್ದಾನೆ. ಪೊಲೀಸರನ್ನು ಗಮನಿಸಿದ ಚಾಲಕ ಪರಾರಿಯಾಗುವಾಗ ರಿವರ್ಸ್ ಗೇರ್‌ನಲ್ಲಿ ತುಂಬ ದೂರ ಕಾರನ್ನು ಓಡಿಸಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚಾಲಕನ ದುಸ್ಸಾಹಸ ಕಂಡ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. I20 ವಾಹನವನ್ನು ಪೊಲೀಸ್ ವಾಹನ ಹಿಂಬಾಲಿಸುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.