ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ಚಲನಚಿತ್ರಗಳ ಹೊರತಾಗಿ ಅವರ ಫ್ಯಾಷನ್ ಸ್ಟೈಲ್ ಮೂಲಕ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಟೈಗರ್ 3 ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸಲ್ಮಾನ್ ಖಾನ್ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡರು.
ಸಲ್ಮಾನ್ ಅವರು ಅಮೀರಿ ಜಾಕೆಟ್, ಪ್ಯಾಂಟ್ ಮತ್ತು ಕ್ಯಾಪ್ ಧರಿಸಿದ್ದರು. ಪ್ಯಾಂಟಿನ ಹಿಂಬದಿಯಲ್ಲಿ ತಮ್ಮದೇ ಮುಖದ ಪ್ರಿಂಟ್ ಅಂಟಿಸಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಅಂತಹ ಫ್ಯಾಶನ್ ವಿನ್ಯಾಸದಿಂದ ಅಭಿಮಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಕಾಮೆಂಟ್‌ಗಳ ಮೂಲಕ ತಮ್ಮ ನೆಚ್ಚಿನ ನಟನ ಡ್ರೆಸ್ ಕೋಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಉಡುಪಿನ ಬಗ್ಗೆ ಸಲ್ಮಾನ್ ಅಭಿಮಾನಿಗಳು ಫಿದಾ ಆಗಿದ್ದಾರೆ. “ಉಡುಪಿನ ಶೈಲಿಯನ್ನು ನೋಡಿ, ಈ ಪ್ಯಾಂಟ್ ನಮ್ಮ ನಟನಿಗೆ ಚೆನ್ನಾಗಿ ಕಾಣುತ್ತದೆ” ಎಂದು ಅವರು ಕಾಮೆಂಟ್ ಮಾಡಿದ್ದಾರೆ.
ಕಪ್ಪು ಜಾಕೆಟ್, ಬಿಳಿ ಪ್ಯಾಂಟ್ ಮತ್ತು ಬೂದು ಬಣ್ಣದ ಟೀ ಶರ್ಟ್‌ನಲ್ಲಿ ನಟ ಸಲ್ಮಾನ್ ಸಕತ್ ಆಗಿ ಕಾಣುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಆದರೆ ಎಲ್ಲರ ಗಮನ ಸೆಳೆದದ್ದು ಅವರ ಪ್ಯಾಂಟ್ ಮಾತ್ರ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
View this post on Instagram