ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮುಖ್ಯ ಆಡಳಿತ ನಿರ್ದೇಶಕರಾಗಿ ಪ್ರಮೋಜ್ ಶಂಕರ್ ಅವರನ್ನು ನೇಮಿಸಲಾಗಿದೆ.
ಬಿಜು ಪ್ರಭಾಕರ್ ಅವರು ಆಡಳಿತ ನಿರ್ದೇಶಕ, ಸಾರಿಗೆ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪ್ರಮೋಜ್ ಅವರನ್ನು ನೇಮಕಗೊಳಿಸಲಾಗಿದೆ. ಐಒಎಫ್ ಎಸ್ ಅಧಿಕಾರಿ ಆಗಿರುವ ಇವರು ತಿರುವನಂತಪುರಂನ ವೆಂಬಯಂ ಮೂಲದವರು.
ಬಿಜು ಪ್ರಭಾಕರ್ ಅವರನ್ನು ಕೈಗಾರಿಕಾ ಕಾರ್ಯದರ್ಶಿಯಾಗಿ ನೇಮಿಸಲಾಗಿದ್ದು, ಮೈನಿಂಗ್ ಜಿಯಾಲಜಿ, ಪ್ಲಾಂಟೇಶನ್, ಹುರಿಹಗ್ಗ, ಕೈಮಗ್ಗ ಮತ್ತು ಗೋಡಂಬಿ ಇಲಾಖೆಗಳ ಜೊತೆಗೆ ಸಾರಿಗೆ ಇಲಾಖೆಯಲ್ಲಿ ರೈಲ್ವೆ, ಮೆಟ್ರೋ ಮತ್ತು ವಿಮಾನಯಾನ ಜವಾಬ್ದಾರಿಯನ್ನೂ ನೀಡಲಾಗಿದೆ. ಜೊತೆಗೆ ಗುರುವಾಯೂರ್ ದೇವಸ್ವಂ ಕಮಿಷನರ್ ಮತ್ತು ಕೂಡಲ್ಮಾಣಿಕ್ಯಂ ದೇವಸ್ವಂ ಉಸ್ತುವಾರಿಯನ್ನೂ ಹೆಚ್ಚುವರಿಯಾಗಿ ಅವರಿಗೆ ನೀಡಲಾಗಿದೆ.