ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಭಕ್ತರ ನಂಬಿಕೆಯ ಅಧಿದೇವತೆ. ಆರ್ಯ ವೈಶ್ಯರ ಕುಲದೈವ. 1.5 ಕೆಜಿ ತೂಕದ ಚಿನ್ನದ ಕಿರೀಟವನ್ನು ಆಂಧ್ರಪ್ರದೇಶದ ಪೆನುಗೊಂಡದಲ್ಲಿ ದೇವಿಗೆ ಸಮರ್ಪಿಸಲಾಗಿದೆ. ಅಲ್ಲದೆ ವಾಸವಿ ಪಂಚಲೋಹ ದೇವಿಯ ವಿಗ್ರಹವು 90 ಅಡಿ ಎತ್ತರವಿದ್ದು. ಐದನೇ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಪೆನುಗೊಂಡದಲ್ಲಿ ನೆಲೆಸಿದ ಮಹಾಮಾತೆ. ಇದು ವಾಸವಿ ದೇವಿಯ ಜನ್ಮಸ್ಥಳವೂ ಹೌದು. ಈ ಮಹಾದೇವಿಯು ಆರ್ಯ ವೈಶ್ಯರ ಭಕ್ತರ ತಾಯಿ. ಈ ದೇವಭೂಮಿಯನ್ನು ಕಾಶಿ ವೈಶ್ಯ ಎಂದೂ ಕರೆಯುತ್ತಾರೆ. ಪೆನುಗೊಂಡದ ವಾಸವಿ ದೇವಸ್ಥಾನದಲ್ಲಿರುವ ಈ 90 ಅಡಿ ಎತ್ತರದ ವಾಸವಿ ದೇವಿ ವಿಗ್ರಹವನ್ನು ವಿಶ್ವದ ಮೊದಲ ಪಂಚಲೋಹ ವಿಗ್ರಹ ಎಂದು ಪರಿಗಣಿಸಲಾಗಿದೆ. ಈಗ ಈ ದೇವಾಲಯಕ್ಕೆ ವಿಶೇಷವಾದ ಕಾಣಿಕೆಯನ್ನು ಸಮರ್ಪಿಸಲಾಗಿದೆ.