ಹೊಸದಿಗಂತ ವರದಿ ರಾಯಚೂರು:
ಜಿಲ್ಲಾ ಉತ್ಸವ ಆಚರಣೆ ದಿನಾಂಕ ಪ್ರಕಟವಾಗಿ ತಿಂಗಳುಗಳೇ ಕಳೆದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಉತ್ಸವದ ದಿನಾಂಕವನ್ನು ಸಭೆಯಲ್ಲಿ ನಿಗದಿಗೊಳಿಸಲಾಗುವುದು ಎನ್ನುವ ಮೂಲಕ ಜಿಲ್ಲಾಡಳಿತಕ್ಕೆ ಮತ್ತು ಸಾರ್ವಜನಿಕರು ಮುಜುಗರ ಪಡುವಂತೆ ಮಾಡಿದರು.
ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ಸರ್ಕಾರಿ ನೌಕರರ ಕ್ರೀಕೂಟ ಉದ್ಘಾಟನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುವ ಸಂದರ್ಭದಲ್ಲಿ ಅವರಿಗೆ ಜಿಲ್ಲಾ ಉತ್ಸವ ದಿನಾಂಕ ನಿಗದಿಯಾಗಿರುವುದು ನನಗೆ ಗೊತ್ತಿಲ್ಲ ಎನ್ನುವುದನ್ನು ಹೇಳಿದರು.
ಇದನ್ನೂ ಓದಿ: Rice series 39 | ಲಂಚ್ ಬಾಕ್ಸ್‌ಗೆ ಸೆಟ್ ಆಗುವ ಸೂಪರ್ ಈಸಿ ತೆಂಗಿನಕಾಯಿ ರೈಸ್
ಉತ್ಸವ ದಿನಾಂಕ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರದೆನೇ ಕೇವಲ ಅಧಿಕಾರಿಗಳು ಸೇರಿ ನಿಗದಿ ಮಾಡಿದರೋ ಹೇಗೆ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಯಿತು. ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳೀಯ ಜಿಲ್ಲೆಯವರಾಗಿದ್ದರೆ ಎಲ್ಲಾ ಮಾಹಿತಿ ಇರುತ್ತದೆ. ಹಬ್ಬ, ಹುಣ್ಣೀಮೆಗೆ ಒಂದು ಬಾರಿ ಆಗಮಿಸಿದರೆ ಹೀಗೆ ಆಗುತ್ತದೆ ಎಂದು ಕ್ರೀಡಾಂಗಣದಲ್ಲಿದ್ದ ಕೆಲ ಸಾರ್ವಜನಿಕರು ಮಾತನಾಡಿದ್ದು ಕೇಳಿಬಂದಿತು.
ಇದೇ ಸಂಸರ್ಭದಲ್ಲಿ ಶಾಸಕ ಡಾ.ಶಿವರಾಜ ಪಾಟೀಲರು ಉತ್ಸವವನ್ನು ಎಲ್ಲರ ಸಹಭಾಗಿತ್ವದಲ್ಲಿ ಮಾಡುವುದು ಉತ್ತಮ. ಕೇವಲ ಅಧಿಕಾರಿಗಳಷ್ಟೇ ಸೇರಿ ಮಾಡುವುದಲ್ಲ ಎಂದು ಹೇಳಿದ್ದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾ ಉತ್ಸವದ ದಿನಾಂಕ ಕುರಿತು ಮತ್ತು ಸಾರ್ವಜನಿಕರು ಆಡಿದ ಮಾತಿನಲ್ಲಿ ಸತ್ಯವಿರಬಹುದು ಎನ್ನುವಂತಾಯಿತು.

