ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿರ್ಮಾಪಕ ಉಮಾಪಿ ಶ್ರೀನಿವಾಸ್ ಹಾಗೂ ನಟ ದರ್ಶನ್ ನಡುವಣ ಕಿತ್ತಾಟಕ್ಕೆ ಇದೀಗ ಫ್ಯಾನ್ಸ್ ಎಂಟ್ರಿಯಾಗಿದ್ದಾರೆ.
ನಟ ದರ್ಶನ್ ಉಮಾಪತಿ ವಿರುದ್ಧ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದು, ಇದೀಗ ಅವರ ಫ್ಯಾನ್ಸ್ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದರು.
ಬೊಮ್ಮನಹಳ್ಳಿಯಲ್ಲಿ ಬೈಕ್ ರ‍್ಯಾಲಿ ನಡೆಸುವ ಪ್ಲಾನ್ ಮಾಡಲಾಗಿದ್ದು, ನಟ ದರ್ಶನ್ ಕೂಡ ಸಆಥ್ ನೀಡುವುದಾಗಿ ಹೇಳಿದ್ದರು. ಆದರೆ ಇದೀಗ ಪೊಲೀಸರು ರ‍್ಯಾಲಿಗೆ ಅನುಮತಿ ನೀಡಿಲ್ಲ ಎಂದು ಹೇಳಲಾಗಿದೆ.
ಉಮಾಪತಿ ಪರವಾಗಿ ನಿಂತವರು, ದರ್ಶನ್ ಪರವಾಗಿ ನಿಂತವರ ಮಧ್ಯೆ ಗಲಾಟೆ ನಡೆಯುವ ಸಾಧ್ಯತೆ ಇರುವ ಕಾರಣ ರ‍್ಯಾಲಿಗೆ ಅವಕಾಶ ಇಲ್ಲ. ಆದ್ರೆ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡಬಹುದು ಎಂದು ಪೊಲೀಸರು ಹೇಳಿದ್ದಾರೆ.
ಕಾಟೇರ ಸಿನಿಮಾ ಸೂಪರ್ ಹಿಟ್ ಆದ ನಂತರ ನಿರ್ಮಾಪಕ ಉಮಾಪತಿ ಸಿನಿಮಾ ಕಥೆ ತಾವೇ ಮಾಡಿಸಿದ್ದು ಹಾಗೂ ಕಾಟೇರ ಟೈಟಲ್ ತಾವೇ ಕೊಟ್ಟಿದ್ದು ಎಂದು ಹೇಳಿದ್ದರು. ಈ ಹೇಳಿಕೆಗೆ ಸಿಟ್ಟಾದ ದರ್ಶನ್ ಅವರನ್ನು ತಗಡು ಎಂದು ಕರೆದಿದ್ದರು.