ಹೊಸದಿಗಂತ ವರದಿ ಬಾಗಲಕೋಟೆ :
ನಗರದ ಹೊಸ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಹಾಗೂ ರಸ್ತೆ ಮೇಲ್ಸೇತುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಪರೆನ್ಸ್ ಮೂಲಕ ನೆರವೇರಿಸಿದರು.
ಪ್ರಧಾನ ಮಂತ್ರಿ .ನರೇಂದ್ರ ಮೋದಿಯವರು ಇಂದು ಏಕಕಾಲದಲ್ಲಿ ದೇಶಾದ್ಯಾಂತ ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯ 554 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗೆ ಮತ್ತು 1500 ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ವಿಡಿಯೋ ಕಾಫರೆನ್ಸ್ ಮೂಲಕ ನೆರವೇರಿಸಿದರು.
ನಗರದ ರೈಲ್ವೆ ನಿಲ್ದಾಣ ಆವರಣದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಪಿ.ಸಿ.ಗದ್ದಿಗೌಡರ, ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಬಾಗಲಕೋಟೆ ಮತ್ತು ಬಾದಾಮಿ ರೈಲ್ವೆ ನಿಲ್ದಾಣ, ಹಾಗೂ ಬಾದಾಮಿ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಮತ್ತು ಗುಳೇದಗುಡ್ಡ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಲಾಯಿತು ಎಂದರು.
ಅಮೃತ ಭಾರತ ಸ್ಟೇಶನ್ ಯೋಜನೆಯಡಿ ಬಾಗಲಕೋಟೆ ಮತ್ತು ಬಾದಾಮಿ ಸ್ಟೇಶನ್ ಆಯ್ಕೆಯಾಗಿದೆ. ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಸೌಲಭ್ಯ ಇರಬೇಕು ಎಂದು ಆಧ್ಯತೆಯನ್ನು ನೀಡಲಾಗಿದೆ.ಬಾದಾಮಿ ಸುತ್ತಮುತ್ತ ಪ್ರವಾಸೋದ್ಯಮ ಇರುವದರಿಂದ ರೈಲ್ವೆ ನಿಲ್ಧಾಣ ಮೇಲ್ದರ್ಜೆಯ ಗೆ ಏರಿಸಲು ಕೇಂದ್ರ ರೈಲ್ವೆ ಮಂತ್ರಿ ಸಹಕಾರ ನೀಡಿದ್ದಾರೆ ಎಂದರು.
ಕೇಂದ್ರ ಸರ್ಕಾರದಿಂದ ರೈಲ್ವೆ ಯೋಜನೆಗೆ ಜಿಲ್ಲೆಗೆ ರೂ.103.37ಕೋಟಿ ಕೊಡುಗೆ ನೀಡಿದ್ದು, ಅದರಲ್ಲಿ ಅಮೃತ ಭಾರತ ಯೋಜನೆ ಅಡಿ ಬಾಗಲಕೋಟೆ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿಗೆ ರೂ.16.24ಕೋಟಿ ಹಾಗೂ ಬಾದಾಮಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿಗೆ ರೂ.15.21ಕೋಟಿ, ಹಾಗೂ LC.No.34 ಬಾದಾಮಿ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ರೂ.39.63ಕೋಟಿ ಮತ್ತು LC.No.41 ಗುಳೇದಗುಡ್ಡ ಸ್ಟೇಷನ್ ಹತ್ತಿರ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ರೂ.32.29ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು ಎಂದರು.
ಈ ಮೊದಲು ಬಾಗಲಕೋಟೆ ನೂತನ ರೈಲ್ವೆ ನಿಲ್ದಾಣ ಕಟ್ಟಡ ನಿರ್ಮಾಣಕ್ಕೆ ರೂ.12.45 ಕೋಟಿ ಮಂಜೂರಾಗಿದ್ದು ಇದರಲ್ಲಿ ಈಗಾಗಲೇ ರೂ.8.00ಕೋಟಿ ಖರ್ಚಾಗಿದ್ದು, ಇನ್ನೂಳಿದ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದನ್ನು ಹೊರತು ಪಡಿಸಿ ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ರೂ.16.24ಕೋಟಿ ಮಂಜೂರಾಗಿದ್ದು, ಈ ಮೊತ್ತದಲ್ಲಿ ಪ್ಲಾಟ್ ಫಾರ್ ಶೆಲ್ಟರ್, ಪಾರ್ಕಿಂಗ್, ಗಾರ್ಡನ್, ಎಸ್ಕಲೇಟರ್, ಲಿಪ್ಟ್, ಇನ್ನೂಳಿದ ಆಧುನಿಕ ಸೌಲಭ್ಯವನ್ನು ನೀಡಲಾಗುವುದು ಎಂದು ತಿಳಿಸಿದರು.
ಬಾದಾಮಿ ರೈಲ್ವೆ ನಿಲ್ದಾಣ ಕಟ್ಟಡಕ್ಕೆ ಈಗಾಗಲೇ ರೂ.2.50ಕೋಟಿ ಈ ಮೊದಲು ಖರ್ಚಾಗಿದ್ದು, ಇದನ್ನು ಹೊರತು ಪಡಿಸಿ ಅಮೃತ ಭಾರತ ಯೋಜನೆ ಆಡಿ ಬಾದಾಮಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿಗೆ ರೂ.15.21ಕೋಟಿ ಮಂಜೂರಾಗಿದ್ದು, ಈ ಮೊತ್ತದಲ್ಲಿ ಪ್ಲಾಟ್ ಫಾರ್ ಶೆಲ್ಟರ್, ಪಾರ್ಕಿಂಗ್, ಗಾರ್ಡನ್, ಎಸ್ಕಲೇಟರ್, ಲಿಪ್ಟ್, ಇನ್ನೂಳಿದ ಆಧುನಿಕ ಸೌಲಭ್ಯವನ್ನು ನೀಡಲಾಗುವುದು ಎಂದರು.
ಡಿಸಿ ಜಾನಕಿ ಕೆ.ಎಂ.ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಏಕಕಾಲಕ್ಕೆ 554 ರೈಲ್ವೆ ನಿಲ್ದಾಣ ಪುನರಾಭಿವೃದ್ದಿ ಮತ್ತು ಮೇಲ್ ಸೇತುವೆ ಕಾಮಗಾರಿಗೆ ಚಾಲನೆ ನೀಡುತ್ತಿರುವುದು ದಾಖಲೆ ಕಾರ್ಯಕ್ರಮ ಆಗಿದೆ. ಜಿಲ್ಲೆಗೆ ಹೊಸ ಶಕ್ತಿ ಬಂದಿದೆ.ರೈಲ್ವೆ ಸಾರಿಗೆ ಸದೃಢ ಆಗಿದೆ ಎಂದರು.
ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ಎಸ್ಪಿ ಅಮರನಾಥ ರೆಡ್ಡಿ, ಸಿಇಓ ಶಶಿಧರ ಕುರೇರ,ಹಿರಿಯ ರೈಲ್ವೆ ಅಧಿಕಾರಿ ಸ್ವಪ್ನಿಲ್, ನಗರಸಭೆ ಸದಸ್ಯೆ ಜ್ಯೋತಿ ಭಜಂತ್ರಿ, ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಿರ್ದೇಶಕ ರಾಜು ರೇವಣಕರ ಇದ್ದರು.