ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ನಿಗೆ ಅಂಗಡಿಯಲ್ಲಿ ಯಾವ ಸೀರೆಯೂ ಇಷ್ಟವಾಗಿಲ್ಲ ಯಾಕಂದ್ರೆ ಅಂಗಡಿಯಲ್ಲಿ ಒಳ್ಳೆ ಸೀರೆಗಳಿಲ್ಲ ಎಂದು ಪತಿ ಅಂಗಡಿಯಾತನಿಗೆ ಥಳಿಸಿದ್ದಾನೆ.
ಶಿರಸಿಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಯ ಟೇಸ್ಟ್‌ಗೆ ತಕ್ಕ ಸೀರೆ ಸಿಕ್ಕಿಲ್ಲ ಎಂದು ಸಿಟ್ಟಾಗಿದ್ದಾನೆ. ಆತ ಸೀರೆಯೊಂದನ್ನು ಖರೀದಿ ಮಾಡಿದ್ದಾನೆ, ನಂತರ ಅದು ಪತ್ನಿಗೆ ಇಷ್ಟವಾಗದ ಕಾರಣ ಮತ್ತೆ ಅಂಗಡಿಗೆ ಬಂದು ಬೇರೆ ಸೀರೆ ಕೊಡುವಂತೆ ಕೇಳಿದ್ದಾನೆ.
ಅಂಗಡಿಯವರು ಬೇರೆ ಸೀರೆಗಳನ್ನು ತೋರಿಸಿದ್ದಾರೆ. ಎಷ್ಟು ಸೀರೆ ತೋರಿಸಿದರೂ ಪತ್ನಿಗೆ ಇಷ್ಟವಾಗಿಲ್ಲ. ಅಂಗಡಿಯವರು ನಮ್ಮಲ್ಲಿ ಇಷ್ಟೇ ಸೀರೆ ಇದೆ ಎಂದು ಹೇಳಿದ್ದಾರೆ. ಅದಕ್ಕೆ ಸಿಟ್ಟಿನಲ್ಲಿ ಇಷ್ಟೇ ಸೀರೆ ಇದ್ಮೇಲೆ ಅಂಗಡಿ ಯಾಕೆ ಎಂದು ಜೋರು ಮಾಡಿದ್ದಾನೆ. ಅಂಗಡಿಯವರು ಇದಕ್ಕೂ ಬಗ್ಗಿ ನಿಮ್ಮ ಹಣ ವಾಪಾಸ್ ಮಾಡುತ್ತೇವೆ ಎಂದಿದ್ದಾರೆ.
ನಂತರ ಗ್ಯಾಂಗ್ ಕಟ್ಟಿಕೊಂಡು ಬಂದು ಅಂಗಡಿಯವರ ಮೇಲೆ ಹಲ್ಲೆ ಮಾಡಿದ್ದಾನೆ. ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಶಿರಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.