ಹೊಸದಿಗಂತ ವರದಿ, ಕಲಬುರಗಿ:
ಪಂಚ ಗ್ಯಾರಂಟಿಗಳ ಅನುಷ್ಠಾನ ಮಾಡುವಲ್ಲಿ ೬೫ ಸಾವಿರ ಕೋಟಿ ಹಣ ಖರ್ಚಾಗುತಿದ್ದು, ಅಭಿವೃದ್ಧಿ ಕೆಲಸಗಳಿಗೆ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಕಾಂಗ್ರೆಸ್ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಬುರಗಿ ನಗರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ, ಉಚಿತ ಬಸ್ ಪ್ರಯಾಣ, ವಿದ್ಯುತ್ ಉಚಿತ ಸೇರಿದಂತೆ ಪಂಚ್ ಗ್ಯಾರಂಟಿಗಳ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ೬೫ ಸಾವಿರ ಕೋಟಿ ಹಣ ಹೋಗುತ್ತಿದ್ದು, ಇದರಿಂದ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದರು.
ನಮ್ಮ ಹಣೆಬರಹ ಕ್ಷೇತ್ರದ ಜನರಿಂದ ಬೈಯಿಸಿಕೊಳ್ಳುವ ಹಾಗಾಗಿದೆ. ಏನಾದರೂ ಅಭಿವೃದ್ಧಿ ಕೆಲಸಗಳು ಮಾಡಬೇಕೆಂದರೆ,ಎಲ್ಲ ಹಣ ಪಂಚ್ ಗ್ಯಾರಂಟಿಗಳ ಅನುಷ್ಠಾನಕ್ಕೆ ಹೋಗುತ್ತಿದೆ. ಇದರಿಂದ ಕ್ಷೇತ್ರದ ಜನರು ಅಲ್ಲಂಪ್ರಭು ಪಾಟೀಲ್ ಹಾಗೇ ಹೇಳಿದ.ಹೀಗೆ ಹೇಳಿದ ಎಂದು ಜನರಿಂದ ಬೈಯಿಸಿಕೊಳ್ಳುವುದೆ ನಮ್ಮ ಹಣೆಬರಹವಾಗಿದೆ ಎಂದು ಹೇಳಿದರು.