ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಪತ್ರೆಯಲ್ಲಿ ಪತ್ನಿ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ಕೇಳಿ ಮನೆಯಲ್ಲಿ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳೂರಿನ ಕೊಣಾಜೆ ಗ್ರಾಮದ ಚಾವಡಿ ನಿವಾಸಿಗಳಾದ ಸೇಸಪ್ಪ ಪೂಜಾರಿ(60), ಮೀನಾಕ್ಷಿ(55) ಮೃತರು.
ಮೀನಾಕ್ಷಿ ಅವರಿಗೆ ಹೃದಯಾಘಾತವಾಗಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುಣಮುಖರಾಗಿ ಮನೆಗೆ ಬಂದ ನಂತರ ಮತ್ತೊಮ್ಮೆ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದರು.
ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟು ಮೀನಾಕ್ಷಿ ಕೊನೆಯುಸಿರೆಳೆದಿದ್ದರು. ಆಸ್ಪತ್ರೆಯಲ್ಲಿ ಪತ್ನಿ ಸಾವಿನ ಸುದ್ದಿ ಕೇಳಿದ ಪತಿ ಸೇಸಪ್ಪ ಮನೆಯಲ್ಲಿ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮದುವೆಯಾಗಿ ವರ್ಷಗಳೇ ಕಳೆದರು ಈ ದಂಪತಿಗೆ ಮಕ್ಕಳಿರಲಿಲ್ಲ. ಸೇಸಪ್ಪನಿಗೆ ಹೆಂಡತಿ ಬಿಟ್ಟು ಇನ್ಯಾವ ಆಸರೆಯೂ ಇರಲಿಲ್ಲ. ಪ್ರೀತಿಯ ಮಡದಿ ಇಲ್ಲದ ಲೋಕದಲ್ಲಿ ಬದುಕಲು ಅಸಾಧ್ಯ ಎಂದು ಸೇಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.