ಮೇ 1ರಿಂದ ರೈಲು ಓಡಾಟ ಸ್ಥಗಿತ: ರೈಲ್ವೆ ನೌಕರರು, ಕಾರ್ಮಿಕರ ಒಕ್ಕೂಟ ತೀರ್ಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಳೆಯ ಪಿಂಚಣಿ ಯೋಜನೆಗಾಗಿ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಮೇ 1 ರಿಂದ ಭಾರತದಾದ್ಯಂತ ಎಲ್ಲಾ ರೈಲು ಸೇವೆಗಳನ್ನು ನಿಲ್ಲಿಸುವುದಾಗಿ ರೈಲ್ವೆ ಕಾರ್ಮಿಕರು ಮತ್ತು ನೌಕರರ ಸಂಘಗಳು ಬೆದರಿಕೆ ಹಾಕಿವೆ ಎನ್ನಲಾಗಿದೆ. ಈ ಒಕ್ಕೂಟಗಳು ಹಳೆಯ ಪಿಂಚಣಿ ಯೋಜನೆ ಪುನರುಜ್ಜೀವನಕ್ಕಾಗಿ ಜಂಟಿ ವೇದಿಕೆಯ ಅಡಿಯಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.

ಹೊಸ ಪಿಂಚಣಿ ವ್ಯವಸ್ಥೆ ಬದಲಿಗೆ ಹಳೆಯ ಪಿಂಚಣಿ ವ್ಯವಸ್ಥೆ ಪರಿಚಯಿಸಲು ನಮ್ಮ ಕರೆಗೆ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಮುಷ್ಕರ ಬಿಟ್ಟು ನಮಗೆ ಬೇರೆ ದಾರಿ ಇಲ್ಲ ಎಂದು ಜೆಎಫ್‌ಆರ್‌ಒಪಿಎಸ್‌ ಸಂಯೋಜಕ ಶಿವ ಗೋಪಾಲ್‌ ಮಿಶ್ರಾ ತಿಳಿಸಿದ್ದಾರೆ.

ವಿವಿಧ JFROPS ಒಕ್ಕೂಟಗಳ ಪ್ರತಿನಿಧಿಗಳು ಜಂಟಿಯಾಗಿ ಮಾರ್ಚ್ 19 ರಂದು ರೈಲ್ವೆ ಸಚಿವಾಲಯಕ್ಕೆ ಸಂದೇಶ ಕಳುಹಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಉದ್ದೇಶಿತ ರಾಷ್ಟ್ರೀಯ ಮುಷ್ಕರ ಮತ್ತು ಮೇ 1, ರಿಂದ ಎಲ್ಲಾ ರೈಲು ಸೇವೆಗಳು ಸ್ಥಗಿತಗೊಳ್ಳಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!