ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಮೇಶ್ವರಂ ಕೆಫೆ ಬ್ಲಾಸ್ಟ್ ಗಾಯಾಳುಗಳನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ವೇಳೆ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಭರವಸೆ ನೀಡಿದ್ದರು.
ಆದರೆ ಗಾಯಾಳುಗಳು ಡಿಸ್ಚಾರ್ಜ್ ಆಗಿದ್ದು, ಯಾವುದೇ ಹಣ ಸಂದಾಯ ಆಗಿಲ್ಲ. ಸರ್ಕಾರದ ಪ್ರತಿನಿಧಿಗಳು ಗಾಯಾಳುಗಳನ್ನು ಭೇಟಿ ಆಗಿ ವೆಚ್ಚದ ಬಗ್ಗೆ ಮಾತನಾಡಿಲ್ಲ.
ಗಾಯಾಳುಗಳ ಬಳಿ ಆಸ್ಪತ್ರೆಗಳು ಹಣ ಪಡೆದಿಲ್ಲ. ಇತ್ತ ಸರ್ಕಾರವೂ ಆಸ್ಪತ್ರೆಗಳಿಗೆ ಹಣ ನೀಡಿಲ್ಲ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ.