MUST READ | ಮಕ್ಕಳಿರೋ ಮನೆಗೆ ಚಾಕೊಲೆಟ್ ತಗೊಂಡ್ ಹೋಗ್ಬೇಡಿ!!

ಗಂಡ-ಹೆಂಡತಿ ತಮ್ಮ ಮ್ಯೂಚುಯಲ್ ಫ್ರೆಂಡ್ ಮನೆಗೆ ಹೊರಟಿದ್ರು. ಫ್ರೆಂಡ್‌ಗೆ ಈಗಿನ್ನೂ ಮೂರ್ ವರ್ಷದ ಮಗ ಇದ್ದ, ಸಖತ್ ತುಂಟ, ಅವ್ನ್ ಕಂಡ್ರೆ ಇವರಿಗೂ ತುಂಬಾ ಪ್ರೀತಿ, ಅವನಿಗೇ ಅಂತ ಇನ್ನೂರ್ ರುಪಾಯಿ ಕೊಟ್ಟು ದೊಡ್ಡ ಚಾಕೋಲೆಟ್ ಒಂದನ್ನು ತಗೊಂಡ್ರು. ಮನೆಗೆ ಬರ‍್ತಿದ್ ಹಾಗೇ ಮಗು ಬಂದು ಹಾಯ್ ಅಂದ.

ನಾವ್ ನಿಂಗೆ ಏನ್ ತಂದಿದಿವಿ ನೋಡು ಅಂತ ಬ್ಯಾಗ್‌ನಲ್ಲಿದ್ದ ಚಾಕೋಲೆಟ್ ತೆಗೆದು ಕೊಟ್ರು. ಮಗು ಫುಲ್ ಖುಷಿಪಡ್ತು. ಚಾಕೋಲೆಟ್ ಆಮೇಲೆ ಫಸ್ಟ್ ಊಟ ಅಂತ ಅವ್ರಮ್ಮ ಹೇಳಿದ್ ಮಾತಿಗೆ ಕ್ಯಾರೆ ಅನ್ದೆ ಮೂಲೆಲಿ ಕೂತು ಚಾಕೋಲೆಟ್ ತಿನ್ನೋಕೆ ಶುರು ಮಾಡ್ತು. ಚಾಕೋಲೆಟ್ ತಂದು ಕೊಟ್ಟವರಿಗೂ ಜೀವನ ಸಾರ್ಥಕ ಅನಿಸ್ತು.

ಇನ್ನೊಂದು ಇನ್ಸಿಡೆಂಟ್ ಕೇಳಿ, ಅವಳಿಗೆ ಮಕ್ಕಳು ಅಂದ್ರೆ ತುಂಬಾ ಇಷ್ಟ. ಮಕ್ಕಳು ಎಲ್ಲೇ ಕಾಣ್ಸಿದ್ರೂ ಮಾತಾಡ್ಸೋದು, ನಗ್ಸೋದು ಮಾಡ್ತಿದ್ಲು. ಅದ್ರಲ್ಲೂ ಗಾರೆ ಕೆಲಸದವರ ಮಕ್ಕಳು, ಬಡವರ ಮಕ್ಕಳು ಅಂದ್ರೆ ತುಂಬಾನೇ ಪ್ರೀತಿ. ಅವ್ರನ್ನ ನೋಡ್ದಾಗೆಲ್ಲಾ ಚಾಕೋಲೆಟ್, ಬಿಸ್ಕೆಟ್, ಚಿಪ್ಸ್ ಇನ್ನೇನೆಲ್ಲಾ ಕಣ್ಣಿಗೆ ಕಾಣಿಸ್ತೋ ಅದನ್ನೆಲ್ಲಾ ಮಕ್ಕಳಿಗೆ ಕೊಟ್ಟು ಖುಷಿ ಪಟ್ಲು. ತಾನೇನೋ ಒಳ್ಳೆ ಕೆಲ್ಸ ಮಾಡ್ದೆ. ಮಕ್ಕಳ ಮುಖದಲ್ಲಿ ಖುಷಿ ತಂದೆ ಅಂತ ತೃಪ್ತಿಯಿಂದ ಮನೆಗೆ ಹೋದ್ಲು.

ಇದರಲ್ಲಿ ತಪ್ಪೇನಿದೆ? ಮಕ್ಕಳಿಗೆ ಅಪರೂಪಕ್ಕೆ ಏನೋ ಚಾಕೊಲೆಟ್ ಕೊಟ್ರೆ ಸಮಸ್ಯೆ ಏನು? ಖಂಡಿತಾ ಇದೆ. ಕೆಲವು ಪೋಷಕರು ಈಗಿನ ಕಾಲದಲ್ಲೂ ತಮ್ಮ ಮಕ್ಕಳನ್ನು ಆರೋಗ್ಯಕರವಾಗಿ ಬೆಳೆಸೋದಕ್ಕೆ ಪ್ರಯತ್ನ ಪಡ್ತಿರ‍್ತಾರೆ. ಚಾಕೋಲೆಟ್ ಅಂದ್ರೆ ಏನು ಅನ್ನೋ ಅರಿವೇ ಇಲ್ಲದಂತೆಯೂ ಬೆಳೆಸಿರಬಹುದು. ಮಕ್ಕಳಿಗಾಗಿ ತಾವು ಚಾಕೋಲೆಟ್ ತಿನ್ನೋದನ್ನು ಬಿಟ್ಟಿರಬಹುದು. ನೀವು ಒಮ್ಮೆ ಹೋಗಿ ಚಾಕೋಲೆಟ್ ತಿನ್ನಿಸಿ ಬಂದ್ರೆ ತಂದೆ ತಾಯಿ ತಪಸ್ಸನ್ನ ಹಾಳು ಮಾಡಿದ ಹಾಗೆ ಆಗುತ್ತದೆ. ಒಂದು ಬಾರಿ ಚಾಕೋಲೆಟ್ ರುಚಿ ಹಿಡಿದ ಮಕ್ಕಳು ಅದಕ್ಕಾಗಿ ಹಠ ಮಾಡ್ತಾರೆ. ಏನೋ ಅಪರೂಪಕ್ಕೆ ಅಂತ ನೀವಂದ್ಕೋತಿರಾ, ಬಟ್ ಆ ತಿಂಗಳು ನಿಮ್ಮಂತೆಯೇ ಅವರ ಮನೆಗೆ ಎಷ್ಟು ಜನ ಬಂದಿರಬಹುದು? ಯೋಚನೆ ಮಾಡಿ.. ಅದೇ ದುಡ್ಡಿಗೆ ಒಂದು ಕೆಜೆ ಸೇಬು ಬರೋದಿಲ್ವಾ?

ಇನ್ನು ರಸ್ತೆ ಬದಿಯಲ್ಲಿ ಮಕ್ಕಳಿಗೆ ಪಾಪ ಅಂತ ಚಾಕ್ಲೆಟ್ ಬಿಸ್ಕೆಟ್ ಹಂಚುವವರೂ ಕೂಡ ಒಮ್ಮೆ ಯೋಚಿಸಿ, ಅವರು ಮೊದಲೇ ಉತ್ತಮ ಆಹಾರ ತಿನ್ನದೇ ವೀಕ್ ಆಗಿರ್ತಾರೆ. ನೀವು ಇಂಥ ಜಂಕ್ ನೀಡಿ ಅವರ ಆರೋಗ್ಯವನ್ನು ಇನ್ನಷ್ಟು ಹಾಳು ಮಾಡ್ತೀರಿ. ಮಕ್ಕಳ ಬಗ್ಗೆ ಕಾಳಜಿ ಇದ್ದರೆ ಹಣ್ಣು, ತರಕಾರಿ, ಮೊಟ್ಟೆ, ಹಾಲು ಅಥವಾ ಇನ್ಯಾವುದೇ ಆರೋಗ್ಯಕರ ಆಹಾರ ನೀಡಬಹುದಲ್ವಾ?

ಚಾಕೋಲೆಟ್‌ನಲ್ಲೇನಿದೆ?
ಸಕ್ಕರೆ, ಫ್ಯಾಟ್, ಸಣ್ಣ ಪ್ರಮಾಣದ ಕೊಕೊವಾ. ಮಕ್ಕಳ ಕಿಡ್ನಿ ಹಾಗೂ ಲಿವರ್ ಇದನ್ನೆಲ್ಲಾ ಅರಗಿಸಿಕೊಳ್ಳೋಕೆ ಆಗೋದಿಲ್ಲ. ಅಷ್ಟೇ ಅಲ್ಲ ಚಾಕೋಲೆಟ್ ಮಕ್ಕಳ ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ. ಒಂದು ನಿಮಿಷದ ಖುಷಿ ಇರಬಹುದು. ಬಟ್ ಇದರಿಂದಾಗಿ ಅತಿಯಾಗಿ ಇರಿಟೇಟ್ ಆಗುವುದು ರಂಪ ಮಾಡುವ ಅಭ್ಯಾಸ ಅವರದ್ದಾಗುತ್ತದೆ. ನಿಮ್ಮ ಮಕ್ಕಳಿಗೆ ಇದನ್ನೆಲ್ಲಾ ತಿನ್ನಿಸೋದಿಲ್ಲ ಅಂತಾದ್ರೆ ಬೇರೆಯವರ ಮಕ್ಕಳಿಗೇಕೆ ಕೊಡ್ತೀರಿ?

ಇದೊಂದು ಸಣ್ಣ ವಿಷಯವೇ ಇರಬಹುದು, ಬಟ್ ಈ ಯೋಚನೆ ಎಷ್ಟೋ ಆರೋಗ್ಯಕರ ಬದಲಾವಣೆಗಳಿಗೆ ಆರಂಭವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!