ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಜೀವನಕ್ಕಿಂತಲೂ ಖಾಸಗಿ ಜೀವನದಿಂದಲೇ ಹೆಚ್ಚು ವಿವಾದಕ್ಕೊಳಗಾದ ನಟಿ ವಿಜಯಲಕ್ಷ್ಮಿ ಇದೀಗ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ.
ನಾಮ್ ತಮಿಳರ್ ಪಾರ್ಟಿಯ ಸೀಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಈ ಹಿಂದೆ ನಟಿ ವಿಜಯಲಕ್ಷ್ಮಿ ಟೆರೇಸ್ ಮೇಲೆ ನಿಂತು ವಿಡಿಯೋ ಮಾತಿದ್ದರು. ಸೀಮಾನ್ ನನ್ನ ಬಳಿ ಮಾತನಾಡಲಿ ಎಂದು ವಿಡಿಯೋ ಮೂಲಕ ಜೀವನವನ್ನು ಜಗಜ್ಜಾಹೀರು ಮಾಡಿದ್ದರು.
ಅದಾದಮೇಲೂ ಸೀಮಾನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ನಟಿ ಇನ್ನೊಂದು ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.
ವಿಡಿಯೋದಲ್ಲೇನಿದೆ?
ನನ್ನ ಸಹೋದರಿಗೆ ತೊಂದರೆ ಎದುರಾಗಿತ್ತು. ಅದಕ್ಕಾಗಿ ನಾನು ಮೊದಲ ಬಾರಿ ಸೀಮಾನ್ನ್ನು ಮೀಟ್ ಮಾಡಿದ್ದೆ. ಆಗ ಆತ ಬ್ಯಾಚುಲರ್ ಆಗಿದ್ದ. ನನ್ನನ್ನೇ ಮದುವೆಯಾಗುವುದಾಗಿ ಹೇಳಿ ಮೂರು ವರ್ಷ ನನ್ನ ಜೊತೆ ಇದ್ದ. ಯಾರಿಗೂ ಹೇಳುವುದು ಬೇಡ ಎಂದು ಹೇಳಿ ರಹಸ್ಯವಾಗಿ ತಾಳಿ ಕಟ್ಟಿದ. ಆದರೆ ಸಮಸ್ಯೆಗಳು ಬರುತ್ತಿದ್ದಂತೆಯೇ ನನ್ನನ್ನು ಒಂಟಿ ಮಾಡಿದ್ದಾನೆ. ನನ್ನ ಜೀವನ ಹಾಳಾಗಿದೆ. ಇದು ನನ್ನ ಕೊನೆಯ ವಿಡಿಯೋ ಇನ್ನೆರಡು ದಿನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಕರ್ನಾಟಕದಲ್ಲೇ ಸಾಯುತ್ತೇನೆ. ನನ್ನ ಸಾವಿಗೆ ಸೀಮಾನ್ ಕಾರಣ ಎಂದು ಹೇಳಿದ್ದಾರೆ.
#WATCH | உண்மையிலேயே இதுதான் என்னோட கடைசி வீடியோ!
நடிகை விஜயலட்சுமி வெளியிட்ட தற்கொலை மிரட்டல் வீடியோ!
“என் மரணம் சீமான் யாருன்னு காமிக்கும்… எல்லாருக்கும் நன்றி!”#ActressVijayalaxmi | #Seeman | #vijayalaxmi | #விஜயலட்சுமி | #vijayalakshmi | #ntk | #NaamThamizharKatchi pic.twitter.com/oOLgbuImzi
— Reflect News Tamil (@reflectnewstn) March 5, 2024