ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ: ಸಚಿವ ಶಿವಾನಂದ ಪಾಟೀಲ

ಹೊಸದಿಗಂತ ವರದಿ ಹಾವೇರಿ:

ಹಾವೇರಿ ನಗರ ಮತ್ತು ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚೆ ಮಾಡಲು ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಜಿಪಂನಲ್ಲಿ ಕುಡಿಯುವ ನೀರಿನ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ಮೂರು ತಿಂಗಳ ಸಮಸ್ಯೆ ಆಗಬಾರದು ಅಂತಾ ಸಭೆ ಕರೆಯಲಾಗಿದೆ.

ಹಾವೇರಿಗೆ ಹೆಗ್ಗೇರಿಯ ಕೆರೆಯಿಂದ ನಗರದ ಕೆರೆ ತುಂಬಿಸುವ ಯೋಜನೆ ಮಾಡುತ್ತಿದ್ದೇವೆ. ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನ ಪರಿಗಣಿಸಿದ್ದೇವೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರ ವಹಿಸುತ್ತಿದ್ದೇವೆ‌ ಎಂದರು.

ಬರಪರಿಹಾರ ನೀಡುವ ವಿಚಾರ
ನಮ್ಮ ಸರ್ಕಾರದಿಂದ‌ ಈಗಾಗಲೇ ರೈತರಿಗೆ ಎಷ್ಟು ಪರಿಹಾರ ಕೊಡಬೇಕು ಅಷ್ಟು ಕೊಟ್ಟಿದ್ದೇವೆ. 126 ಕೋಟಿ ರುಪಾಯಿ ರೈತರಿಗೆ ಪರಿಹಾರ, ಜೊತೆಗೆ ತಲಾ ರೈತರಿಗೆ 2000 ರುಪಾಯಿ ನೀಡಲಾಗಿದೆ.
ಇನ್ನು ಹೆಚ್ಚಿನ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದೇವೆ. ಕೇಂದ್ರದಿಂದ ಒಂದೆ ಒಂದು ರುಪಾಯಿ ಪರಿಹಾರ ನೀಡಿಲ್ಲ ಎಂದರು.

ಪಾಕ್ ಪರ ಘೋಷಣೆ ವಿಚಾರ
ನಾಶಿಪುಡಿ ಹಾವೇರಿವ ಅಂತಲ್ಲಾ, ಈ ದೇಶದಲ್ಲಿ ಈ ರೀತಿಯ ಘೋಷಣೆ ಕೂಗಿದ್ದು ತಪ್ಪು. ಅದನ್ನ ಖಂಡನೆ ಮಾಡುತ್ತೇವೆ. ಅವರ ಮೇಲೆ‌ ಏನು ಕ್ರಮ‌ ಆಗಬೇಕು ಅದನ್ನ ಸಿಎಂ ಮತ್ತು ಗೃಹಸಚಿವರು ಕ್ರಮ ತೆಗೆದುಕೊಳ್ಳುತ್ತಾರೆ.

ವಿಧಾನಸೌಧಲ್ಲಿ ಈ ಪ್ರಕರಣವನ್ನ ಖಂಡನೆ ಮಾಡಿದ್ದೇವೆ. ಕೆಲವೊಬ್ಬರ ಸಮರ್ಥನೆ ಮಾಡಿಕೊಂಡವರು ಉತ್ತರ ಕೊಡುತ್ತಾರೆ. ಅವರು ತಪ್ಪು ಮಾಡಿದ್ದು ನಾವು ಸಮರ್ಥನೆ ಮಾಡಲ್ಲ. ನಾಶಿಪುಡಿ ಯಾರ ಜೊತೆಗೆ ಸಂಪರ್ಕ ಹೊಂದಿದ್ದರೂ ಕೂಡ ಆತನ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!