ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಸ್ಥಾನದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಮಿಸ್ ಆಗಿ ಮುಟ್ಟಿದ್ದಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯನಪುರ ಬಳಿ ನಡೆದಿದೆ. ಯೋಗೇಶ್ (23) ಕೊಲೆಯಾದ ದುರ್ದೈವಿ.
ಯೋಗೇಶ್ ಬೈಕ್ ಸರ್ವೀಸ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ ದೇವಸ್ಥಾನದ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಗಲಾಟೆ ನಡೆದಿದೆ. ಆಗ ನಾಲ್ವರು ದುಷ್ಕರ್ಮಿಗಳು ಯೋಗೇಶ್ ನನ್ನು ಹಿಂಬಾಲಿಸಿ ಬಂದು ಚೂರಿಯಿಂದ ಇರಿದಿದ್ದಾರೆ.
ಇದೆ ವೇಳೆ ಯೋಗೇಶ್ ತಪ್ಪಿಸಿಕೊಳ್ಳಲು ಮನೆಯೊಂದರ ಕಾಂಪೌಂಡ್ ಹಾರಿದ್ದಾನೆ. ಆದರೆ ಕಾಂಪೌಂಡ್ ನಲ್ಲಿ ಇಟ್ಟಿದ್ದ ಗಾಜುಗಳು ಆತನಿಗೆ ಚುಚ್ಚಿದ ಪರಿಣಾಮ ತೀವ್ರ ಗಾಯಗೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಇನ್ನು ಪೊಲೀಸ್ ತನಿಖೆ ವೇಳೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದ್ದು. ಬ್ಯಾಟರಾಯನಪುರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.