ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮ್ಮ ಪತಿ ಪ್ರಧಾನಿ ಮೋದಿ ಹೆಸರು ಜಪಿಸುತ್ತಿದ್ದರೆ ಅವರಿಗೆ ಊಟ ನೀಡಬೇಡಿ ಎಂದಿದ್ದಾರೆ ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್!
ದಿಲ್ಲಿಯಲ್ಲಿ ಹಮ್ಮಿಕೊಳ್ಳಲಾದ ಮಹಿಳಾ ಸಮ್ಮಾನ್ ಸಮರೋಹ್ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮ್ಮ ಬೆಂಬಲಕ್ಕೆ ನಿಮ್ಮ ಸಹೋದರ ಕೇಜ್ರಿವಾಲ್ ಮಾತ್ರ ನಿಲ್ಲುತ್ತಾರೆ. ಬಿಜೆಪಿಯನ್ನು ಬೆಂಬಲಿಸುವ ಇತರ ಮಹಿಳೆಯರಿಗೂ ಇದನ್ನು ಹೇಳಿ ಎಂದು ಅವರು ಹುಕುಂ ಮಾಡಿದ್ದಾರೆ.
ನಾನು ಮಹಿಳೆಯರಿಗೆ ಕರೆಂಟ್ ಫ್ರೀ ಮಾಡಿದ್ದೇನೆ, ಬಸ್ ಟಿಕೆಟ್ ಉಚಿತ ಮಾಡಿದ್ದೇನೆ ಎಂದು ಹೇಳಿ. ಅಲ್ಲದೇ ಈಗ ನಾನು ಪ್ರತಿ ತಿಂಗಳು ಮಹಿಳೆಯರಿಗೆ ಈ ಒಂದು ಸಾವಿರ ರೂ. ಗಳನ್ನೂ ನೀಡುತ್ತಿದ್ದೇನೆ. ಬಿಜೆಪಿ ಅವರಿಗೆ ಏನು ಮಾಡಿದೆ? ಬಿಜೆಪಿಗೆ ಏಕೆ ಮತ ಹಾಕಬೇಕು? ಈ ಬಾರಿ ಕೇಜ್ರಿವಾಲ್‌ಗೆ ಮತ ಹಾಕಿ ಎಂದು ಎಂದು ಆವರು ಈ ಸಂದರ್ಭ ಕರೆ ನೀಡಿದರು.