ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಲಾರಂಭಿಸಿದೆ ‘ವಿ ವಾಂಟ್ ಪ್ರತಾಪ್ ಸಿಂಹ’!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಲೋಕಸಭಾ ಚುನಾವಣೆ ಸ್ಪರ್ಧೆಯಲ್ಲಿ ಅವಕಾಶ ತಪ್ಪಿಹೋಗಲಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಬೆನ್ನಿಗೇ ಸಾಮಾಜಿಕ ಜಾಲತಾಣಗಳಲ್ಲಿ ಸಿಂಹ ಪರ ಅಭಿಯಾನ ಆರಂಭವಾಗಿದೆ.

‘ವಿ ವಾಂಟ್ ಪ್ರತಾಪ್ ಸಿಂಹ’ ಈಗ ಟ್ರೆಂಡಿಂಗ್ ಆಗುತ್ತಿದ್ದು, ಜಾಲತಾಣಗಳಲ್ಲಿ ಸಹಿ ಸಂಗ್ರಹ ಅಭಿಯಾನ ಕೂಡಾ ಆರಂಭವಾಗಿದೆ. ಪ್ರತಾಪ್ ಸಿಂಹಗೆ ಟಿಕೆಟ್ ನೀಡದಿದ್ದರೆ ಹೋರಾಟದ ಜೊತೆಗೆ ನೋಟ ಮತ ಚಲಾಯಿಸುವುದಾಗಿ ಹಲವರು ಎಚ್ಚರಿಕೆ ನೀಡಿದ್ದಾರೆ. ಇನ್ನು ಕೆಲವರು ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಬಗ್ಗೆ ಕಮೆಂಟ್ ಹಾಕುತತಿದ್ದಾರೆ. ಪ್ರತಾಪ್ ಸಿಂಹ ಕೊಡುಗೆಗಳ ಪಟ್ಟಿಯನ್ನು ಪೋಸ್ಟ್ ಮಾಡಿ ಟಿಕೆಟ್ ಅವರಿಗೇ ಕೊಡಿ ಎಂದು ಕೂಡಾ ಒತ್ತಾಯಿಸಲಾಗುತ್ತಿದೆ.

ಬಿಜೆಪಿ ಇದುವರೆಗೆ ಯಾವುದೇ ಅಭ್ಯರ್ಥಿ ಹೆಸರು ಬಹಿರಂಗ ಗೊಳಿಸದಿದ್ದರೂ, ಟಿಕೆಟ್ ಕುರಿತಾಗಿನ ಅಂತೆ ಕಂತೆ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಕಾವೇರಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!