ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಗಿ ತಿಂದವರಿಗೆ ರೋಗ ಬರುವುದಿಲ್ಲ ಎನ್ನುತ್ತಾರೆ. ಆದರೆ ಎಲ್ಲದಕ್ಕೂ ಒಂದು ಇತಿಮಿತಿ ಅನ್ನೋದು ಇರುತ್ತದೆ. ಅದೇ ರೀತಿ ಹೆಚ್ಚು ಧಾನ್ಯಗಳನ್ನು ತಿನ್ನುವುದು ಒಳ್ಳೆಯದಲ್ಲ. ಈ ಸಮಸ್ಯೆ ಇರುವವರು ರಾಗಿಯನ್ನು ತಿನ್ನುವುದು ಹಾಗೂ ಕುಡಿಯುವುದನ್ನ ತ್ಯಜಿಸಬೇಕು.
ಹೌದು, ತಜ್ಞರ ಪ್ರಕಾರ, ರಾಗಿ ಎಲ್ಲರಿಗೂ ಸೂಕ್ತವಲ್ಲ. ಅತಿಯಾಗಿ ತಿನ್ನುವುದು ಹಾನಿಕಾರಕ, ಅದನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಮೂತ್ರಪಿಂಡದ ಕಲ್ಲುಗಳಿರುವ ಜನರಿಗೆ ರಾಗಿಯನ್ನು ಸಾಮಾನ್ಯವಾಗಿ ಶಿಫಾರಸು ಮಾಡುವುದಿಲ್ಲ. ಏಕೆಂದರೆ ಇದು ದೇಹದಲ್ಲಿ ಆಕ್ಸಾಲಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ.
ರಾಗಿಯಲ್ಲಿ ಕಂಡುಬರುವ ಕೆಲವು ಪೋಷಕಾಂಶಗಳ ಅತಿಯಾದ ಸೇವನೆಯು ಅತಿಸಾರ ಮತ್ತು ಹೊಟ್ಟೆ ಉಬ್ಬುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಇದ್ದರೆ ರಾಗಿಯನ್ನು ಸೇವಿಸಬೇಡಿ.
ಆಹಾರ ಅಸಹಿಷ್ಣುತೆ ಹೊಂದಿರುವ ಮಕ್ಕಳಿಗೆ ರಾಗಿಯನ್ನು ಶಿಫಾರಸು ಮಾಡುವುದಿಲ್ಲ. ಏಕೆಂದರೆ ಇದು ಅತಿಸಾರ ಮತ್ತು ಗ್ಯಾಸ್, ಅಥವಾ ಹೊಟ್ಟೆ ನೋವನ್ನು ಉಂಟುಮಾಡಬಹುದು. ನಿಮ್ಮ ಮಗು ಮಲಬದ್ಧತೆ ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಸರಿಯಾದ ಸಲಹೆ ಮತ್ತು ಚಿಕಿತ್ಸೆಗಾಗಿ ಮಕ್ಕಳ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.